ಗಜರಾಜನ ಬುದ್ಧಿವಂತಿಕೆಗೆ ಮನಸೋತ ನೆಟ್ಟಿಗರು; ಜನೆ ಮೆಚ್ಚಿದ Video Viral

Untitled design - 2025-01-07T195555.678
Published on

ಬೀಜಿಂಗ್​​: ಆನೆಗಳು ಶಕ್ತಿಯುತವಾಗಿರುವುದರ ಜತೆಗೆ ಸಾಕಷ್ಟು ಮುಗ್ಧವಾಗಿವೆ. ಇವುಗಳನ್ನು ಕಾಡಿನ ಅತ್ಯಂತ ಕರುಣಾಮಯಿ ಪ್ರಾಣಿಗಳೆಂದು ಪರಿಗಣಿಸಲಾಗುತ್ತದೆ. ಯಾವಾಗಲೂ ತಮ್ಮ ಬುದ್ಧಿವಂತಿಕೆಯಿಂದ ಜನರನ್ನು ಅಚ್ಚರಿಗೊಳಿಸುತ್ತವೆ. ಇಂತಹದ್ದೆ ಆನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್(Video Viral ) ಆಗುತ್ತಿದೆ. ಈ ವಿಡಿಯೋ ಚೀನಾದಿಂದ ಬಂದಿದೆ ಎನ್ನಲಾಗಿದೆ.

ವೈರಲ್​ ವಿಡಿಯೋದಲ್ಲಿ ಆನೆಯು ತನ್ನ ಆವರಣದಲ್ಲಿರುವುದನ್ನು ನೀವು ನೋಡಬಹುದು. ಇದ್ದಕ್ಕಿದ್ದಂತೆ ಮಗುವಿನ ಶೂ ಅದರ ಬಳಿ ಬೀಳುತ್ತದೆ. ಮಗುವಿನ ಈ ತಪ್ಪಿನಿಂದಾಗಿ ಆನೆಯು ಕೋಪಗೊಳ್ಳುವುದಿಲ್ಲ. ಬಹಳ ಶಾಂತವಾಗಿ ಆನೆಯು ತನ್ನ ಟ್ರಂಕ್‌ನಿಂದ ಶೂ ಅನ್ನು ಎತ್ತಿಕೊಂಡು ಆವರಣದ ಹೊರಗೆ ನಿಂತಿರುವ ಮಗುವಿಗೆ ಕೊಡುತ್ತದೆ. ಆನೆ ಇದನ್ನು ಬಹಳ ಎಚ್ಚರಿಕೆಯಿಂದ ಮಾಡುತ್ತದೆ.

ಆನೆಯ ಮುಗ್ಧತೆಯ ಕ್ರಿಯೆಯು ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಹೃದಯವನ್ನೂ ಗೆದ್ದಿದೆ. ಹೆಚ್ಚಿನ ಪ್ರಾಣಿಗಳಿಗೆ ಮಕ್ಕಳ ಮೇಲೆ ಪ್ರೀತಿ ಇದೆ, ಪ್ರಾಣಿಗಳು ಮಕ್ಕಳೊಂದಿಗೆ ಆಟವಾಡುತ್ತವೆ, ಈ ಸುಂದರ ಮತ್ತು ಬೃಹತ್ ಪ್ರಾಣಿಯಿಂದ ನಾವು ಮನುಷ್ಯರು ಬಹಳಷ್ಟು ಕಲಿಯಬೇಕಾಗಿದೆ, ಪ್ರಾಣಿಗಳು ತುಂಬಾ ಮುದ್ದಾಗಿವೆ ಮತ್ತು ನಾವು ಹೇಗೆ ಆಗುತ್ತಿದ್ದೇವೆ? ಎಂದು ಕಾಮೆಂಟ್​ ಮಾಡಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net