

BJP Leader Suicide: ತೆಲಂಗಾಣದ ಉಪ್ಪಳದಲ್ಲಿ ಸ್ಥಳೀಯ ಬಿಜೆಪಿ ಮುಖಂಡನೊಬ್ಬ ತನ್ನ ತಾಯಿಗೆ ಕಪಾಳಕ್ಕೆ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದಕ್ಕೆ ಮನನೊಂದು ಗುರುವಾರ(ಅ. 09) ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಮೃತರನ್ನು ಉಪ್ಪಳ ನಿವಾಸಿ ಮತ್ತು ಬಿಜೆಪಿ ನಾಯಕ ರೇವಳ್ಳಿ ರಾಜು ಎಂದು ಗುರುತಿಸಲಾಗಿದೆ. ಟ್ರೋಲ್ಗೆ ಗುರಿಯಾದ ಬಳಿಕ ಅವರು ಮನೆಯಿಂದ ಕಾಣೆಯಾಗಿದ್ದರು ಎನ್ನಲಾಗಿದೆ. ಅವರ ಪತ್ನಿ ಗುರುವಾರ ಉಪ್ಪಳ ಪೊಲೀಸರಿಗೆ ದೂರು ನೀಡಿದ್ದರು. ಮರುದಿನ ಶುಕ್ರವಾರ ಬೆಳಿಗ್ಗೆ ಅವರ ಶವ ಬೀಬಿನಗರ ಕೆರೆಯಲ್ಲಿ ಪತ್ತೆಯಾಗಿದೆ.
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ವಿಡಿಯೋ ಮಾಡಿರುವ ರಾಜು, ನನ್ನ ತಾಯಿಯ ಕಪಾಳಕ್ಕೆ ಹೊಡೆದು ತಪ್ಪು ಮಾಡಿದ್ದೇನೆ. ಆದರೆ ಅವರು ಹಿರಿಯರ ಮುಂದೆ ನನಗೆ ಶಿಕ್ಷೆ ನೀಡಬಹುದಿತ್ತು. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದರು ಸರಿಯಲ್ಲ. ಗೌರವಕ್ಕಾಗಿ ನಾನು ನನ್ನ ಪ್ರಾಣವನ್ನೇ ಕೊಡಲು ಸಿದ್ಧ. ಅವರು ಆ ವೀಡಿಯೊವನ್ನು ರೆಕಾರ್ಡ್ ಮಾಡಿ ವೈರಲ್ ಮಾಡಿದ್ದರಿಂದ, ನಾನು ಸಮಾಜದಲ್ಲಿ ಎಲ್ಲಾ ಗೌರವವನ್ನು ಕಳೆದುಕೊಂಡೆ. ನಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಆತ್ಮಹತ್ಯೆ ಬಗ್ಗೆ ಉಪ್ಪಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)