

ನ್ಯೂಯಾರ್ಕ್: ನಾವು ಸಾಮಾನ್ಯ ಸುಂಟರಗಾಳಿಯನ್ನು ನೋಡಿದ್ದೇವೆ. ಅದರೆ ಅಮೆರಿಕದಲ್ಲಿ ಕನ್ಸಾಸ್ ನಗರದಲ್ಲಿ ಸೃಷ್ಟಿಯಾದ ಸುಂಟರಗಾಳಿ ಹಿಂದೆಂದೂ ಕಂಡಿಲ್ಲ. ಇದರ ಭೀಕರತೆಗೆ ನಗರವೊಂದು ಬಹುತೇಕ ನಾಶವಾಗಿದೆ. ನೂರಾರು ಮನೆಗಳನ್ನು ಹೊತ್ತೊಯ್ದು ಛಿದ್ರ ಛಿದ್ರಗೊಳಿಸುವಷ್ಟು ಪ್ರಬಲ ಸುಂಟರಗಾಳಿ ಇದಾಗಿದ್ದು, ಇದು ಊಹಿಸಿಕೊಳ್ಳಲೂ ಕಷ್ಟವಾಗಬಹುದು. ಆದರೂ ನಿಜ.
ಡ್ರೋನ್ ಮೂಲಕ ಸೆರೆ ಹಿಡಿಯಲಾದ ಸುಂಟರಗಾಳಿ ರೌದ್ರಾವತಾರಕ್ಕೆ ಮನೆಗಳೇ ಧ್ವಂಸಗೊಂಡಿರುವುದಲ್ಲದೇ ತನ್ನ ಜಾಗವನ್ನೇ ಬದಲಿಸಿವೆ. ಹಲವು ಮನೆಗಳು ಕಿಲೋ ಮೀಟರ್ ಗಟ್ಟಲೆ ದೂರದಲ್ಲಿ ಬಿದ್ದಿವೆ. ಘಟನೆಯಲ್ಲಿ ನೂರಾರು ಜನರು ಗಾಯಗೊಂಡಿದ್ದಾರೆ.
ಸಣ್ಣ ಪ್ರಮಾಣದಲ್ಲಿ ಸೃಷ್ಟಿಯಾದ ಈ ಸುಂಟರಗಾಳಿ ನೋಡ ನೋಡುತ್ತಿದ್ದಂತೆ ವೇಗ ಪಡೆದುಕೊಂಡು ಮನೆಗಳನ್ನೇ ಹೊತ್ತೊಯ್ಯುತ್ತಿರುವ ವಿಡಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಈವರೆಗೆ 2.8 ಮಿಲಿಯನ್ ಜನರು ವೀಕ್ಷಿಸಿದ್ದಾರೆ.