ಯಪ್ಪಾ…ಕೇಕನ್ನು ಹೀಗೂ ಮಾಡ್ತಾರಾ?; ಮುನಿಸಿಕೊಂಡ ನೆಟ್ಟಿಗರು!

cake viral
Published on

ಬೆಂಗಳೂರು: ಕೆಲವು ಫುಡ್ ಮೇಕಿಂಗ್ ವಿಡಿಯೋಗಳು ಬಾಯಲ್ಲಿ ನೀರೂರಿಸುತ್ತವೆ. ಆದರೆ ಕೆಲವು ವಿಡಿಯೋಗಳನ್ನು ನೋಡಿದ ನಂತರ ಅವರ ಬಗ್ಗೆ ಅಸಹ್ಯ ಮೂಡುತ್ತದೆ. ನಾವು ಸಾಮಾನ್ಯವಾಗಿ ವಿಡಿಯೋ ಬ್ಲಾಗ್‌ಗಳು, ರೀಲ್ಸ್ ಮತ್ತು ಶಾರ್ಟ್ಸ್ ನಲ್ಲಿ ಅಂತಹ ವಿಡಿಯೋಗಳನ್ನು ನೋಡುತ್ತೇವೆ. ಇದಕ್ಕಾಗಿಯೇ ವಿಶೇಷವಾಗಿ ಫುಡ್ ವ್ಲಾಗರ್ ಗಳು ಹುಟ್ಟಿಕೊಂಡಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಅವರೆಲ್ಲ ಹಲವೆಡೆ ಸುತ್ತಾಡಿಕೊಂಡು ಆಹಾರ ತಯಾರಿಸುವ ಬಗೆಯನ್ನು ವಿವರಿಸುತ್ತಾರೆ. ಅದರ ರುಚಿ ಹೇಳುತ್ತಾರೆ. ಅವುಗಳಲ್ಲಿ ಕೆಲವು ಅನಿರೀಕ್ಷಿತವಾಗಿ ವೈರಲ್ ಆಗುತ್ತವೆ.

ಕಳೆದ ತಿಂಗಳು, ಚಾಕೊಲೇಟ್ ಐಸ್ ಕ್ರೀಮ್ ತಯಾರಿಕೆಯನ್ನು ತೋರಿಸುವ Instagram ರೀಲ್ ವೈರಲ್ ಆಗಿತ್ತು. ಅದಕ್ಕೂ ಮೊದಲು ಮರ್ಮುರಾ ಮತ್ತು ಉಪ್ಪು ಕಡಲೆಕಾಯಿಗೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗಿದ್ದವು. ಅವುಗಳನ್ನು ತಯಾರಿಸುವ ಬಗೆಯನ್ನು ತೋರಿಸುವ ವಿಡಿಯೋ ನೋಡಿ ಜನ ಬೆರಗಾದರು. ಇತ್ತೀಚೆಗೆ ಕೇಕ್ ಮಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಂದಹಾಗೆ ಫುಡ್ ಬಿಹೈಂಡ್ ದಿ ಸೀನ್ಸ್ ಫ್ಯಾಕ್ಟ್ಸ್ ಎಂಬ ಶೀರ್ಷಿಕೆಯಡಿಯಲ್ಲಿ ನೆಟ್ಟಿಗರೊಬ್ಬರು ಈ ಕೇಕ್ ತಯಾರಿಕೆಯ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಕೆಲ ನೆಟ್ಟಿಗರು ಕೇಕ್ ತಯಾರಿಯ ಹಿಂದೆ ಇಷ್ಟೊಂದು ಕೆಲಸವಿದೆಯೇ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ ಮತ್ತು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ, ಮನೆಗಳಲ್ಲಿ ಹೇಗೆ ತಯಾರಿಸಬೇಕು ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನು ಕೆಲವರು ಕೇಕ್ ತಯಾರಿಕೆಯ ಬಗ್ಗೆ ಕೋಪಗೊಂಡಿದ್ದಾರೆ. ಕೇಕ್ ಬಹಳ ಅನೈರ್ಮಲ್ಯದಿಂದ ಕೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಕ್ ತಯಾರಿಸುವ ಬೇಕರಿಗಳು ಮತ್ತು ರೆಸ್ಟೋರೆಂಟ್‌ಗಳು ಕೆಲವು ಮಾರ್ಗಸೂಚಿಗಳನ್ನು ಅನುಸರಿಸಲು ಸೂಚಿಸಿದ್ದಾರೆ. ಹಾಗೆಯೇ ಪ್ರಸಿದ್ಧ ಕಂಪನಿಗಳಿಂದ ಮಾತ್ರ ಕೇಕ್ ಖರೀದಿಸಲು ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net