More

    ಸಿಡಿಲು ಬಿಡಿದು ಐತಿಹಾಸಿಕ ಕುತುಬ್ ಶಾಹಿ ಮಸೀದಿಗೆ ಹಾನಿ

    ಹೈದರಾಬಾದ್‌: ಲಂಗರ್ ಹೌಜ್‌ನಲ್ಲಿರುವ ಕುತುಬ್ ಶಾಹಿ ಮಸೀದಿಗೆ ಸೋಮವಾರ ಸಿಡಿಲು ಬಡಿದಿದೆ. ಇದರಿಂದಾಗಿ ಮಿನಾರ್‌ಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ. ಭಾರೀ ಮಳೆಯ ವೇಳೆ ಮಸೀದಿಗೆ ಸಿಡಿಲು ಬಡಿದು ಮಿನಾರ್ ಧ್ವಂಸಗೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅದರ ಚೂರುಗಳು ನೆಲದ ಮೇಲೆ ಬಿದ್ದಿದ್ದು, ಮಸೀದಿಯನ್ನು ಆಡಳಿತ ಸಮಿತಿ ಸದಸ್ಯರು ಪರಿಶೀಲಿಸಿದ ನಂತರ ಹೆಚ್ಚಿನ ವಿದ್ಯುತ್ ಉಪಕರಣಗಳಾದ ಆಂಪ್ಲಿಫೈಯರ್, ವೈರಿಂಗ್ ಹಾನಿಗೀಡಾಗಿರುವುದು ಕಂಡು ಬಂದಿದೆ. ಕಾರವಾನ್ ಶಾಸಕ ಕೌಸರ್ ಮೊಹಿಯುದ್ದೀನ್ ಮಸೀದಿಗೆ ಭೇಟಿ ನೀಡಿ ವ್ಯವಸ್ಥಾಪನಾ ಸಮಿತಿ ಸದಸ್ಯರೊಂದಿಗೆ ಮಾತನಾಡಿದರು. ಈ ವಿಚಾರವನ್ನು ತೆಲಂಗಾಣ ರಾಜ್ಯ ವಕ್ಫ್ ಮಂಡಳಿಯ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

    ಧಾರಾಕಾರ ಮಳೆ ಹೈದರಾಬಾದ್ ಜನತೆಯನ್ನು ತಲ್ಲಣಗೊಳಿಸಿದೆ. ಸಂಜೆ ವೇಳೆ ಹಲವರು ಕೆಲಸ ಮುಗಿಸಿ ಮನೆಗೆ ತೆರಳುವ ವೇಳೆಗೆ ಸುರಿವ ಮಳೆಯಿಂದಾಗಿ ನಗರದ ಜನತೆ ಬಹಳ ಕಷ್ಟ ಅನುಭವಿಸುತ್ತಿದ್ದಾರೆ.

    ಹೈದರಾಬಾದ್‌ನಲ್ಲಿ ಗುಡುಗು ಸಹಿತ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಒಂದೆಡೆ ಮಳೆ, ಇನ್ನೊಂದೆಡೆ ವಾಹನ ದಟ್ಟಣೆ, ನಿಯಂತ್ರಿಸಲು ಪೊಲೀಸರೂ ಪರದಾಡುತ್ತಿದ್ದಾರೆ. ಹೈದರಾಬಾದ್‌ನಲ್ಲಿ ಸೋಮವಾರ ಸಂಜೆ ಸುರಿದ ಮಳೆಗೆ ನಗರದ ರಸ್ತೆಗಳು ನದಿಗಳಾಗಿ ಮಾರ್ಪಟ್ಟಿವೆ. ಹಲವೆಡೆ ಮೊಣಕಾಲು ಆಳದಲ್ಲಿ ನೀರು ನಿಂತಿತ್ತು. ಕೆಲವು ಮನೆಗಳಿಗೆ ನೀರು ನುಗ್ಗಿದ್ದು, ಹೈಟೆಕ್ ಸಿಟಿಯಿಂದ ನಾಗೋಲ್, ಎಲ್.ಬಿ.ನಗರ, ಮೊಹದಿಪಟ್ಟಣ, ಮಲಕ್ ಪೇಟೆಗೆ ಸಂಚಾರ ಸ್ಥಗಿತಗೊಂಡಿತು. ಸಂಜೆ ಆರು ಗಂಟೆಯಿಂದ ತಡರಾತ್ರಿವರೆಗೂ ಇದೇ ಪರಿಸ್ಥಿತಿ ಕಂಡು ಬಂತು. ಸೈಬರಾಬಾದ್ ಪೊಲೀಸ್ ಕಮಿಷನರ್ ಸ್ಟೀಫನ್ ರವೀಂದ್ರ ನೇರವಾಗಿ ಫೀಲ್ಡಿಗಿಳಿದು ಟ್ರಾಫಿಕ್ ನಿಯಂತ್ರಿಸಿದರು.

    ಗ್ಲಾಮರ್ ಪಾತ್ರಗಳಿಗೆ ಯೆಸ್ ಎನ್ನುತ್ತಿರುವ ‘ನಟ ಸಾರ್ವಭೌಮ ಚಿತ್ರ’ದ ಚೆಲುವೆ ಅನುಪಮಾ ಪರಮೇಶ್ವರನ್​; ಕಾರಣ ಇದೇನಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts