

ನವದೆಹಲಿ: ಕೇಂದ್ರದ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ವಿಧಿವಶರಾಗಿ ಇಂದಿಗೆ ಒಂದು ವರ್ಷ. ಪ್ರಧಾನಿ ನರೇಂದ್ರ ಮೋದಿ ಅವರನ್ನು ತುಂಬಾ ಮಿಸ್ ಮಾಡ್ಕೊಳ್ತಿದ್ದಾರೆ. ಜೇಟ್ಲಿ ಅವರ ಮೊದಲ ಪುಣ್ಯತಿಥಿಯಂದು ಭಾವುಕರಾದ ಪ್ರಧಾನಿ ಮೋದಿ, ಕಳೆದ ವರ್ಷ ಇದೇ ದಿನ ನಾವು ಶ್ರೀ ಅರುಣ್ ಜೇಟ್ಲಿ ಅವರನ್ನು ಕಳೆದುಕೊಂಡೆವು. ನಾನು ನನ್ನ ಫ್ರೆಂಡನ್ನು ತುಂಬಾ ಮಿಸ್ ಮಾಡ್ಕೊಳ್ತಿದ್ದೇನೆ ಎಂದು ಮೊದಲ ಸಾಲಿನಲ್ಲೇ ಬರೆದುಕೊಂಡಿದ್ದಾರೆ.
ಅರುಣ್ ಜಿ ಭಾರತಕ್ಕೆ ಶ್ರದ್ಧೆಯಿಂದ ಸೇವೆಯನ್ನು ಸಲ್ಲಿಸಿದ್ದರು. ಅವರ ಜಾಣ್ಮೆ, ಬುದ್ಧಿಶಕ್ತಿ, ಕಾನೂನು ಕುಶಾಗ್ರಮತಿಯೊಂದಿಗಿನ ಅವರ ವ್ಯಕ್ತಿತ್ವ ಐತಿಹಾಸಿಕವಾದುದಾಗಿತ್ತು ಎಂದು ಅವರನ್ನು ಮೋದಿ ಸ್ಮರಿಸಿಕೊಂಡಿದ್ದಾರೆ.
ಅಲ್ಲದೆ, ಕಳೆದ ವರ್ಷ ಅವರ ಸ್ಮರಣಾಂಜಲಿ ಕಾರ್ಯಕ್ರಮದಲ್ಲಿ ನಾನೇನು ಮಾತನಾಡಿದ್ದೆನೋ ಅದರ ವಿಡಿಯೋ ಇಲ್ಲಿದೆ ಎಂದು ಯೂಟ್ಯೂಬ್ ಲಿಂಕ್ ಅನ್ನು ಟ್ವೀಟ್ ಮಾಡಿದ್ದಾರೆ. ಅವರ ಭಾಷಣ ವೀಕ್ಷಿಸಲು ಮೇಲಿನ ವಿಡಿಯೋ ಕ್ಲಿಕ್ ಮಾಡಬಹುದು.