VIDEO| ಎಮ್ಮೆ ಮೇಲೆ ಬಂದ ಚುನಾವಣಾ ಅಭ್ಯರ್ಥಿ! ಕಾರಣ ಏನು?

buffaloman
Published on

ಪಟ್ನಾ: 'ಯಾರೇ ಕೂಗಾಡಲಿ, ಊರೇ ಹೋರಾಡಲಿ ನಿನ ನೆಮ್ಮದಿಗೆ ಭಂಗವಿಲ್ಲ! ಎಮ್ಮೇ... ನಿನಗೆ ಸಾಟಿ ಇಲ್ಲ' ಎಂದು ಡಾ. ರಾಜ್​ಕುಮಾರ್​ ಅವರು ಚಿತ್ರದಲ್ಲಿ ಹಾಡಿ ಕುಣಿದಿದ್ದು ನೀವು ನೋಡಿದ್ದೀರಿ. ಈಗ ಇಂಧನಗಳ ಬೆಲೆ ಹೆಚ್ಚಾಗಿದೆ ಎನ್ನುತ್ತಾ ರಾಜಕಾರಣಿ ಒಬ್ಬರು, ಎಮ್ಮೆಯ ಸವಾರಿ ಮಾಡಿಕೊಂಡು ಚುನಾವಣಾ ಕಣ ಪ್ರವೇಶಿಸಿರುವುದನ್ನು ನೋಡಿ!

ಹೌದು! ಪಂಚಾಯತಿ​ ಚುನಾವಣೆ ಅಭ್ಯರ್ಥಿಯೊಬ್ಬರು, ಎಮ್ಮೆಯ ಮೇಲೆ ಕುಳಿತುಕೊಂಡು ಬಂದು ನಾಮಪತ್ರ ಸಲ್ಲಿಸಿರುವ ಕುತೂಹಲಕಾರಿ ಘಟನೆ ಬಿಹಾರದಲ್ಲಿ ನಡೆದಿದೆ. ಕಟಿಹಾರ್​ ಜಿಲ್ಲೆಯ ರಾಮಪುರ ಪಂಚಾಯತ್​ ಸದಸ್ಯನಾಗಲು ಬಯಸಿರುವ ಆಜಾದ್​ ಅಲಂ ಎಂಬುವರೇ ಈ ಅಭ್ಯರ್ಥಿ.

ಹಲವಾರು ಸಮರ್ಥಕರೊಂದಿಗೆ ರಸ್ತೆಯಲ್ಲಿ ಎಮ್ಮೆಯ ಮೇಲೆ ಕುಳಿತು ಮೆರವಣಿಗೆ ಬಂದ ಅಲಂ ಅವರು, "ನಾನು ಗೋವುಗಳನ್ನು ಸಾಕುವವನು. ನನಗೆ ಪೆಟ್ರೋಲ್​ ಅಥವಾ ಡೀಸೆಲ್​ ಬೆಲೆ ತೆರಲು ಸಾಧ್ಯವಿಲ್ಲ. ಅದಕ್ಕೇ ಎಮ್ಮೆಯ ಮೇಲೆ ಬಂದಿದ್ದೇನೆ" ಎಂದು ಹೇಳಿದ್ದಾರೆಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ರಾಜ್ಯದಲ್ಲಿ ಪಂಚಾಯಿತಿ ಚುನಾವಣೆಗಳ ಪ್ರಕ್ರಿಯೆ ಆರಂಭವಾಗಿದ್ದು, ಸೆಪ್ಟೆಂಬರ್ 24 ರಿಂದ ಡಿಸೆಂಬರ್​ 12 ರವರೆಗೆ 11 ಹಂತಗಳಲ್ಲಿ ಮತದಾನ ನಡೆಯಲಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net