ಗುಜರಾತ್​ ನೂತನ ಸಿಎಂ ಆಗಿ ಭೂಪೇಂದ್ರಭಾಯ್​ ಪಟೇಲ್​ ಆಯ್ಕೆ

patel
Published on

ಗಾಂಧಿನಗರ: ಅಹಮದಾಬಾದ್​ನ ಘಟಲೋದಿಯ ಕ್ಷೇತ್ರದ ಶಾಸಕರಾದ ಭೂಪೇಂದ್ರಭಾಯಿ ಪಟೇಲ್​ ಅವರನ್ನು ಗುಜರಾತ್​ನ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ಇಂದು ಗಾಂಧಿನಗರದ ಬಿಜೆಪಿ ಕಾರ್ಯಾಲಯ 'ಕಮಲಂ'ನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಶನಿವಾರ ನಿಕಟಪೂರ್ವ ಸಿಎಂ ವಿಜಯ್​ ರೂಪಾನಿ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಈ ಸ್ಥಳ ತೆರವಾಗಿತ್ತು. ರಾಜ್ಯದ ಮುಂದಿನ ವಿಧಾನಸಭಾ ಚುನಾವಣೆಯು ಡಿಸೆಂಬರ್​ 2022 ಕ್ಕೆ ನಡೆಯಲಿದ್ದು, 59 ವರ್ಷ ವಯಸ್ಸಿನ ಪಟೇಲ್​ ಅವರಿಗೆ 15 ತಿಂಗಳು ಅಧಿಕಾರ ನಡೆಸುವ ಅವಕಾಶವಿದೆ.

ಆಶ್ಚರ್ಯವೆಂದರೆ ಸಿಎಂ ಗಾದಿಗೆ ಅಭ್ಯರ್ಥಿಗಳೆಂದು ಕೇಳಿಬರುತ್ತಿದ್ದ ಹೆಸರುಗಳನ್ನು ಬಿಟ್ಟು ಪಟೇಲ್​ ಅವರ ಆಯ್ಕೆಯಾಗಿದೆ. 2017 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನ ಶಶಿಕಾಂತ್​ ಪಟೇಲ್​ ವಿರುದ್ಧ 1 ಲಕ್ಷ 17 ಸಾವಿರ ಮತಗಳ ದಾಖಲೆ ಅಂತರದಲ್ಲಿ ಗೆದ್ದಿದ್ದ ಭೂಪೇಂದ್ರ ಪಟೇಲ್​ ಅವರು, ಈವರೆಗೆ ಸಚಿವ ಸಂಪುಟದಲ್ಲೂ ಇರಲಿಲ್ಲ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net