VIRAL VIDEO | ಆಹಾ, ಏನು ರುಚಿ ಅಂತ ಚಪ್ಪರಿಸಿಕೊಂಡು ತಿನ್ನುವ ಮುನ್ನ ಒಮ್ಮೆ ಈ ಸುದ್ದಿ ಓದಿ!

WhatsApp Image 2024-06-03 at 5.05.04 PM
Published on

ನಮ್ಮಲ್ಲಿ ಹೆಚ್ಚು ಜನರು ಕುರುಕಲು ತಿಂಡಿಗಳು, ರಸ್ತೆಬದಿಯಲ್ಲಿ ಮಾರುವ ಬಗೆಬಗೆಯ ಖಾದ್ಯಗಳನ್ನು ಕಂಡರೆ ಹೊಟ್ಟೆತುಂಬುವವರೆಗೂ ಚಪ್ಪರಿಸಿಕೊಂಡು ತಿನ್ನುತ್ತಾರೆ. ಅದರಲ್ಲೂ ಶುಚಿ-ರುಚಿಗೆ ಕಿಂಚಿತ್ತು ಆದ್ಯತೆ ಕೊಡದ ಕೆಲವರು, ತಮ್ಮಿಷ್ಟದ ಚಾಟ್ಸ್​, ಲಘು ಆಹಾರವನ್ನು ತಿನ್ನೋದು ಮಾತ್ರ ನಿಲ್ಲಿಸುವುದಿಲ್ಲ. ಯಾರು ಏನೇ ಹೇಳಲಿ, ಏನಾದರೂ ಅಂದುಕೊಳ್ಳಲಿ ನಾವು ತಿನ್ನುವುದಕ್ಕೇ ಹುಟ್ಟಿರೋದು ಎಂದೆಲ್ಲಾ ಹೇಳುತ್ತಾರೆ. ಆದ್ರೆ, ಇಲ್ಲೊಂದು ವೈರಲ್ ವಿಡಿಯೋ ಆಹಾರ ಪ್ರಿಯರನ್ನು ಭಾರೀ ಅಚ್ಚರಿಗೆ ದೂಡಿದ್ದು, ತಲೆಮೇಲೆ ಕೈಯಿಟ್ಟು ಕೂರುವಂತೆ ಮಾಡಿದೆ.

ರಸ್ತೆಬದಿಯಲ್ಲಿ ಮಾರುತ್ತಿದ್ದ ಚೋಲೆ ಬಟುರಾ ಆಹಾರವನ್ನು ಖರೀದಿಸಿದ ಮಹಿಳೆಯೊಬ್ಬಳು, ತಿನ್ನುವಾಗ ಅದರೊಳಗೆ ಸತ್ತುಬಿದ್ದಿರುವ ಹಲ್ಲಿಯನ್ನು ಕಂಡು ಭಾರೀ ಅಚ್ಚರಿಗೆ ಒಳಗಾಗಿದ್ದು, ವಿಡಿಯೋ ಮಾಡಿಕೊಳ್ಳುವ ಮೂಲಕ ಅಂಗಡಿ ಮಾಲೀಕನ ವಿರುದ್ಧ ಪೊಲೀಸರ ಬಳಿ ದೂರು ನೀಡಿ, ತಮ್ಮ ಪರಿಸ್ಥಿತಿಯನ್ನು ಎಲ್ಲರ ಸಮ್ಮುಖದಲ್ಲಿ ವಿವರಿಸಿದ್ದಾರೆ.

ದೆಹಲಿಯ ರಸ್ತೆಬದಿಯಲ್ಲಿರುವ ರಾಜ್​ಕಮಲ್​ ಚೋಲೆ ಬಟುರಾ ಅಂಗಡಿಯಲ್ಲಿ ಈ ಘಟನೆ ಸಂಭವಿಸಿದೆ. ಆಹಾರದಲ್ಲಿ ಸತ್ತುಬಿದ್ದಿರುವ ಹಲ್ಲಿ ಸೇರಿರುವುದನ್ನು ಪತ್ತೆಹಚ್ಚಿದ ಮಹಿಳಾ ಗ್ರಾಹಕಿ, ತನಗೆ ಕೊಡಲಾದ ಚೋಲೆ ಬಟುರಾದಲ್ಲಿ ಹಲ್ಲಿ ನೋಡಿ, ನಿಂತಲ್ಲೇ ಜೋರಾಗಿ ಕಿರುಚಾಡಿದ್ದಾರೆ. ಈ ಅಂಗಡಿಯಲ್ಲಿ ಏನನ್ನು ತೆಗೆದುಕೊಳ್ಳಬೇಡಿ, ನೀರು ಸಹ ಸೇವಿಸಬೇಡಿ ಎಂದು ಇತರರಿಗೆ ಎಚ್ಚರಿಕೆ ಸಹ ಕೊಟ್ಟಿದ್ದಾರೆ. ಸದ್ಯ ಘಟನೆಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net