ನದಿಯಲ್ಲಿ ಬೈಕ್​ ಚಾಲನೆ! ಸವಾರನ ಹುಚ್ಚು ಸಾಹಸಕ್ಕೆ ಬೆರಗಾದ ನೆಟ್ಟಿಗರು, ವಿಡಿಯೋ ವೈರಲ್​

Bike Ride in River
Published on

ನವದೆಹಲಿ: ಸವಾರನೊಬ್ಬ ನದಿಯಲ್ಲಿ ಬೈಕ್​ ಚಲಾಯಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ನೀವೇನು ತಮಾಷೆ ಮಾಡ್ತಿಲ್ಲ ತಾನೇ ಅಂತ ಅಂದುಕೊಳ್ಳಬೇಡಿ. ಈ ವಿಡಿಯೋ ನೋಡಿದರೆ ನೀವು ಹೌದು ಎನ್ನುತ್ತೀರಿ. ವಿಡಿಯೋ ನೋಡಿ ನೆಟ್ಟಿಗರು ಸಹ ಹುಬ್ಬೇರಿಸಿದ್ದಾರೆ.

ಮೋಟಾರ್​ ಆಕ್ಟೇನ್​ ಹೆಸರಿನ ಟ್ವಿಟರ್​ ಪೇಜ್​​ನಲ್ಲಿ ವಿಡಿಯೋ ಶೇರ್​ ಮಾಡಲಾಗಿದೆ. ಸಣ್ಣ ವಿಡಿಯೋ ತುಣುಕಿನಲ್ಲಿ ಬೈಕ್​ ಮೇಲೆ ಕುಳಿತಿರುವ ವ್ಯಕ್ತಿ ನದಿಯ ಒಳಗೆ ಬೈಕ್​ ಇಳಿಸಿಕೊಂಡು ಸುಮಾರು ದೂರದವರೆಗೆ ನದಿಯಲ್ಲಿ ಬೈಕ್​ ಚಲಾಯಿಸಿಕೊಂಡು ಹೋಗಿ ಗುರಿ ತಲುಪಿರುವ ದೃಶ್ಯ ಇದೆ.

ಸೂಕ್ತ ಉದಾಹರಣೆಯಂತೆ

ಮನಸ್ಸಿದ್ದರೆ ಮಾರ್ಗ ಎಂಬುದಕ್ಕೆ ಈ ವಿಡಿಯೋ ಸೂಕ್ತ ಉದಾಹರಣೆ ಎಂದು ವಿಡಿಯೋಗೆ ಅಡಿಬರಹ ನೀಡಲಾಗಿದೆ. ಅಲ್ಲದೆ, ಈ ಬಗ್ಗೆ ಆಲೋಚಸಿ, ಇದು ತುಂಬಾ ಬುದ್ಧಿವಂತಿಯೇ? ಅಥವಾ ತುಂಬಾ ಅಪಾಯಕಾರಿಯೇ? ಎಂದು ವಿಡಿಯೋ ಕುರಿತು ಪ್ರಶ್ನಿಸಲಾಗಿದೆ.

ಭಾರೀ ವೀಕ್ಷಣೆ

ಜಾಲತಾಣ ವೇದಿಕೆಯಲ್ಲಿ ವಿಡಿಯೋ ವೈರಲ್​ ಆಗಿದೆ. ಈವರೆಗೂ 4 ಲಕ್ಷಕ್ಕೂ ಅಧಿಕ ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದಾರೆ. 2 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋ ಇಷ್ಟಪಟ್ಟಿದ್ದು, ನೂರಾರು ಮಂದಿ ಕಾಮೆಂಟ್​ಗಳ ಮಹಾಪೂರವನ್ನೇ ಹರಿಸಿದ್ದಾರೆ.

ನೆಟ್ಟಿಗರು ಹೇಳಿದ್ದೇನು?

ನಿಸ್ಸಂಶಯವಾಗಿ ಇದು ಅಪಾಯಕಾರಿ. ನೀರು ಎಕ್ಸಾಸ್ಟ್ ಪ್ರವೇಶಿಸಿದರೆ ಎಂಜಿನ್‌ಗೆ ಏನಾಗುತ್ತದೆ? ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದಾರೆ. ಇದು ಅಪಾಯ ಎನಿಸಿದರೂ ಆತ ಬಹಳ ಬುದ್ಧಿವಂತ ಎಂದು ಮತ್ತೋರ್ವ ನೆಟ್ಟಿಗ ಅಭಿಪ್ರಾಯಪಟ್ಟಿದ್ದಾರೆ. ಸ್ಥಳೀಯರಿಗೆ ಅವರ ನದಿಯ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ. ಅವರು ಬಾಲ್ಯದಿಂದಲೂ ಅಲ್ಲಿ ವಾಸಿಸುತ್ತಿದ್ದಾರೆ. ಇದು ಅಸ್ಸಾಂನಲ್ಲಿ ಸಾಮಾನ್ಯವಾಗಿದೆ ಎಂದು ಇನ್ನೋರ್ವ ನೆಟ್ಟಿಗ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net