VIDEO | ಬೈಕ್​ನಲ್ಲೇ ರೊಮ್ಯಾನ್ಸ್; ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತು ಪ್ರಿಯಕರನನ್ನು ತಬ್ಬಿಕೊಂಡು ಸಾಗಿದ ಯುವತಿ!

Couples Romance
Published on

ಛತ್ತೀಸ್‌ಗಢ: ಸದಾ ಸಂಚಾರ ದಟ್ಟಣೆಯಿರುವ ರಸ್ತೆಯಲ್ಲಿ ಪ್ರೇಮಿಗಳಿಬ್ಬರು ತಬ್ಬಿಕೊಂಡು ಬೈಕ್​ನಲ್ಲಿ ತೆರಳುತ್ತಾ ರೊಮ್ಯಾನ್ಸ್​ ಮಾಡಿದ್ದಾರೆ. ಪ್ರೇಮಿಗಳಿಬ್ಬರ ಕೃತ್ಯವನ್ನು ರಸ್ತೆಯಲ್ಲಿ ಸಾಗುತ್ತಿದ್ದ ಇತರೆ ವಾಹನ ಸವಾರರು ವಿಡಿಯೋ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ಪ್ರೇಮಿಗಳನ್ನು ಪತ್ತೆ ಮಾಡಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಛತ್ತೀಸ್‌ಗಢದ ದುರ್ಗ್‌ನಲ್ಲಿ ರಸ್ತೆಯಲ್ಲಿ ಪ್ರೇಮಿಗಳಿಬ್ಬರು ಬಹಿರಂಗವಾಗಿ ತಬ್ಬಿಕೊಂಡು ಬೈಕ್​ನಲ್ಲಿ ಚಲಿಸಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಯುವಕ ಬೈಕ್​ ಸೀಟ್​ ಮೇಲೆ ಕುಳಿತಿದ್ದರೆ, ಯುವತಿ ಪೆಟ್ರೋಲ್ ಟ್ಯಾಂಕ್ ಮೇಲೆ ಹಿಮ್ಮುಖವಾಗಿ ಕುಳಿತುಕೊಂಡು ಮುಂದೆ ಸಾಗಿರುವುದು ಕಾಣಬಹುದು. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಇವರ ಮೇಲೆ ಪೊಲೀಸರು ಕ್ರಮ ವಹಿಸಬೇಕು ಎಂದು ಕಮೆಂಟ್ ಮಾಡಿದ್ದಾರೆ.

ಹದಿಹರೆಯದ ಯುವಕ, ಯುವತಿಯರು ರಸ್ತೆ ಮೇಲೆ ಇಂತಹ ಅನಾಚರಾಗಳನ್ನು ಮಾಡುವುದರಿಂದ ಇತರೆ ಸಹ ಸವಾರರಿಗೆ ತೊಂದರೆಯಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಪ್ರಾಣವನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಬಹುದು. ಹೀಗಾಗಿ ಸಾರ್ವಜನಿಕ ರಸ್ತೆಯಲ್ಲಿ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net