

ಬೆಂಗಳೂರು: ಎಮ್ಮೆಗಳ ಕಾಟಕ್ಕೆ ಕಂಗಾಲಾದ ಐಟಿ-ಬಿಟಿ ಕಂಪನಿ ಉದ್ಯೋಗಿಗಳು ಸಮಸ್ಯೆಯಿಂದ ಪಾರು ಮಾಡುವಂತೆ ಟ್ವಿಟರ್ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಳಗ್ಗಿನ ಹೊತ್ತಲ್ಲಿ ಆಫೀಸ್ಗೆ ಹೋಗುವ ವೇಳೆ ಎಮ್ಮೆಗಳ ಹಿಂಡು ರಸ್ತೆಯಲ್ಲೇ ಇರುತ್ತವೆ. ಇದರಿಂದ ನಿತ್ಯವೂ ಟ್ರಾಫಿಕ್ ಜ್ಯಾಮ್ ಉಂಟಾಗುತ್ತಿದೆ. ಆಫೀಸ್ ದಾರಿಯಲ್ಲಿ ಸರತಿ ಸಾಲಿನಲ್ಲಿ ಎಮ್ಮೆಗಳು ನಿಧಾನವಾಗಿ ಚಲಿಸುವುದರಿಂದ ಬೇಗನೆ ಆಫೀಸ್ಗೆ ತಲುಪಲು ಸಾಧ್ಯವಾಗುತ್ತಿಲ್ಲ. ಇದರಿಂದ ನಿತ್ಯ ನಗರದ ಕಸವನಹಳ್ಳಿ ರೋಡ್ನಲ್ಲಿ 30-45 ನಿಮಿಷ ಟ್ರಾಫಿಕ್ ಜ್ಯಾಮ್ ಉಂಟಾಗುತ್ತಿದೆ ಎಂದು ಟೆಕ್ಕಿಗಳು ಪೊಲೀಸರಿಗೆ ಟ್ವೀಟ್ ಮೂಲ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಕ್ರಮ ಕೈಗೊಳ್ಳಲು ಟೆಕ್ಕಿಗಳು ಟೀಟ್ವರ್ನಲ್ಲಿ ಪಶುಸಂಗೋಪನಾ ಇಲಾಖೆ, ಟ್ರಾಫಿಕ್ ಪೋಲಿಸ್, ಬಿಬಿಎಂಪಿಗೆ ಟ್ಯಾಗ್ ಮಾಡಿ ದೂರು ನೀಡಿದ್ದಾರೆ. ಈ ಸಮಸ್ಯೆ ಕಳೆದ ಆರೇಳು ತಿಂಗಳಿನಿಂದ ನಿತ್ಯ ಸಂಭವಿಸುತ್ತಿದೆ ಎಂದು ಟೆಕ್ಕಿಗಳು ಹೇಳಿಕೊಂಡಿದ್ದಾರೆ.