VIDEO| ಘೋಷಣೆ ಕೂಗಿಸುತ್ತಾ ವೇದಿಕೆಯಿಂದ ಬಿದ್ದ ನಾಯಕ

leaderfall
Published on

ಭೋಪಾಲ್​​: ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಜೈಕಾರ ಕೂಗಿಸುವ ಭರದಲ್ಲಿ ಬಿಜೆಪಿ ನಾಯಕರೊಬ್ಬರು ವೇದಿಕೆಯಿಂದ ಕೆಳಗೆ ಬೀಳುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಖಾರ್ಗೋನ್ ಜಿಲ್ಲೆಯ ಚಹರ್‌ಪುರದಲ್ಲಿ ನಡೆದಿರುವ ಆಕಸ್ಮಿಕ ಘಟನೆಯ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾರ್ವಜನಿಕ ಸಭೆಯೊಂದಕ್ಕೆ ಆಗಮಿಸಿದ ಸಿಎಂ ಚೌಹಾಣ್​​​ ವೇದಿಕೆ ಏರಿದ ಸಂದರ್ಭದಲ್ಲಿ ಬೆಂಬಲಿಗರಿಂದ ಘೋಷಣೆ ಕೂಗಿಸುತ್ತಿದ್ದ ಬಿಜೆಪಿ ನಾಯಕ ಜಗದೀಶ್ ಜೈಸ್​ವಾಲ್​, ವೇದಿಕೆಯ ಆಚೆಗೆ ಕಾಲಿಟ್ಟು ಮುಖದ ಮೇಲೆ ಬಿದ್ದಿರುವ ಘಟನೆ ನಡೆದಿದೆ. "ಪ್ರದೇಶ್​​ ಕಾ ನೇತಾ ಕೈಸಾ ಹೋ" ಎನ್ನುತ್ತಾ ವೇದಿಕೆಯ ಮುಂದಮುಂದಕ್ಕೆ ಬರುವ ಜೈಸ್ವಾಲ್ ಅರಿವಿಲ್ಲದೆ ಹೆಜ್ಜೆ ಹಾಕಿ ಮುಗ್ಗರಿಸಿಬಿದ್ದಿದ್ದಾರೆ. ತಕ್ಷಣ ಅಲ್ಲಿದ್ದ ಇತರ ಕಾರ್ಯಕರ್ತರು, ಭದ್ರತಾ ಸಿಬ್ಬಂದಿ ಅವರ ಸಹಾಯಕ್ಕೆ ಓಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net