

ನವದೆಹಲಿ: ಲೇಡಿ ಸೂಪರ್ಸ್ಟಾರ್ ಎಂದೇ ಖ್ಯಾತರಾಗಿರುವ ಬಹುಭಾಷಾ ನಟಿ ನಯನತಾರಾಗೆ ಇಂದು ಜನ್ಮದಿನದ ಸಂಭ್ರಮ. ತಮ್ಮ 37ನೇ ಹುಟ್ಟಿದಹಬ್ಬವನ್ನು ಅವರು ತಮ್ಮ ಫಿಯಾನ್ಸಿ ಚಿತ್ರನಿರ್ಮಾಪಕ ವಿಘ್ನೇಶ್ ಶಿವನ್ರೊಂದಿಗೆ ಆಚರಿಸಿಕೊಂಡರು.
ಕೇಕ್ ಕಟಿಂಗ್ ಕಾರ್ಯಕ್ರಮದಲ್ಲಿ ಅವರ ಮುಂದಿನ ಚಿತ್ರ 'ಕಾತುವಾಕುಲ ರೆಂಡು ಕಾದಲ್'ನ ಸಹಕಲಾವಿದರಾದ ಸಮಂತಾ ರುತ್ ಪ್ರಭು ಮತ್ತು ವಿಜಯ್ ಸೇತುಪತಿ ಕೂಡ ಪಾಲ್ಗೊಂಡರು.
ಹಳದಿ ಟಾಪ್ ಮತ್ತು ಲೂಸ್ ಜೀನ್ಸ್ ತೊಟ್ಟು ಸರಳವಾಗಿ ಕಾಣಿಸಿಕೊಂಡ ನಯನತಾರಾ ತಮ್ಮ ಬರ್ತ್ಡೇ ಸಂದರ್ಭದ ವಿಡಿಯೋ ತುಣುಕನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇಂಗ್ಲಿಷಿನಲ್ಲಿ ನಯನ್ ಎಂಬ ಅಕ್ಷರಗಳ ಮಾದರಿಯ ಕೇಕ್ಗಳು ಮತ್ತು ಹ್ಯಾಪಿ ಬರ್ತ್ಡೇ ಲೇಡಿ ಸೂಪರ್ಸ್ಟಾರ್ ಎಂದು ಬರೆದ ಚಾಕಲೇಟ್ ಕೇಕ್ ಅವರ ಬರ್ತ್ಡೇಗೆ ವಿಶೇಷವಾಗಿದ್ದವು.
ಸಮಂತಾ ಕೂಡ ಹ್ಯಾಪಿ ಬರ್ತ್ಡೇ ನಯನ್ ಎಂದು ವಿಶ್ ಮಾಡಿ, ಅವರನ್ನು ತಬ್ಬಿ ನಿಂತ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. (ಏಜೆನ್ಸೀಸ್)