ಅಯ್ಯೋ ನನ್ನ ಮೊಬೈಲ್... ನೀರಿನಲ್ಲಿ ಎಷ್ಟೇ ಹುಡುಕಾಡಿದ್ರೂ ಫೋನ್​ ಸಿಗದೇ ಕಣ್ಣೀರಿಟ್ಟ ಯುವಕ! Phone ​

Phone
Published on

Phone : ಮಳೆ ನೀರಿನಲ್ಲಿ ಕಳೆದುಹೋದ ತನ್ನ ಸೆಲ್‌ಫೋನ್‌ಗಾಗಿ ಹುಡುಕಾಡಿದ ಯುವಕನೊಬ್ಬ, ಫೋನ್​ ಸಿಗದಿದ್ದಕ್ಕೆ ರಸ್ತೆ ಪಕ್ಕದಲ್ಲಿ ಕುಳಿತು ಕಣ್ಣೀರಿಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ರಾಜಸ್ಥಾನದ ಜೈಪುರದ ಸುಭಾಷ್ ಚೌಕ್ ಎಂಬ ಪ್ರದೇಶದಲ್ಲಿ ಹಲ್ದಾರ್ ಹೆಸರಿನ ಯುವಕ ವಾಸವಿದ್ದಾನೆ. ಆತ ತನ್ನ ಸ್ಕೂಟಿಯನ್ನು ಸವಾರಿ ಮಾಡುವಾಗ, ರಾಮ್ ನಿವಾಸ್ ಬಾಗ್ ಬಳಿಯ ರಸ್ತೆಯಲ್ಲಿ ಮಳೆಯಿಂದಾಗಿ ಸಂಗ್ರಹವಾಗಿದ್ದ ನೀರಿಗೆ ಆಕಸ್ಮಿಕವಾಗಿ ಬಿದ್ದನು. ಈ ವೇಳೆ ಆತನಿಗೆ ಯಾವುದೇ ಗಾಯಗಳಾಗಿಲ್ಲ. ಆದರೆ, ಸ್ಕೂಟಿಯಿಂದ ಬಿದ್ದ ಪರಿಣಾಮ ಆತನ ಜೇಬಿನಲ್ಲಿದ್ದ ಸೆಲ್ ಫೋನ್ ಹಾರಿ ನೀರಿಗೆ ಬಿದ್ದಿತು. ಅಯ್ಯೋ ನನ್ನ ಫೋನ್ ಎಂದು ಯೋಚಿಸುತ್ತಲೇ ಆತ ಗಾಬರಿಯಿಂದ ನೀರಿಗೆ ಹಾರಿದ. ಆ ಕೆಸರಿನ ನೀರಿನಲ್ಲಿ ಫೋನ್​ಗಾಗಿ ತುಂಬಾ ಸಮಯ ಹುಡುಕಾಡಿದ. ಆದರೆ, ದುರಾದೃಷ್ಟವಶಾತ್​ ಫೋನ್​ ಸಿಗಲೇ ಇಲ್ಲ.

ಇದೇ ವೇಳೆ ದಾರಿಯಲ್ಲಿ ಹೋಗುತ್ತಿದ್ದ ಜನರು ಆ ಹುಡುಗನನ್ನು ನೋಡಿ ಕನಿಷ್ಠ ಪಕ್ಷ ಏನಾಯಿತು ಅಂತಾನೂ ಕೇಳಲಿಲ್ಲ. ಯಾರೊಬ್ಬರು ಸಹಾಯಕ್ಕೆ ಬಾರಲಿಲ್ಲ. ಎಷ್ಟೇ ಹುಡುಕಾಡಿದರೂ ಆತನಿಗೆ ಫೋನ್​ ಪತ್ತೆಯಾಗಲೇ ಇಲ್ಲ. ಅದೇ ಬೇಸರದಲ್ಲಿ ಆ ಯುವಕ ರಸ್ತೆ ಪಕ್ಕದಲ್ಲಿ ಕುಳಿತು, ತಲೆಯ ಮೇಲೆ ತನ್ನ ಎರಡೂ ಕೈಗಳನ್ನು ಹಾಕಿ ಕಣ್ಣೀರಾಕಿದನು.

ಅಲ್ಲಿಯೇ ಇದ್ದ ಮತ್ತೊಬ್ಬ ವ್ಯಕ್ತಿ ತನ್ನ ಫೋನ್‌ನಲ್ಲಿ ಇದನ್ನೆಲ್ಲ ರೆಕಾರ್ಡ್ ಮಾಡುತ್ತಿದ್ದ. ಈ ಮಧ್ಯೆ, ವಿಡಿಯೋ ತೆಗೆದ ವ್ಯಕ್ತಿ ಯುವಕನ ಬಳಿ ಹೋಗಿ ಏನಾಯಿತು ಕೇಳಿದ. ಈ ವೇಳೆ ಕಣ್ಣಲ್ಲಿ ನೀರು ತುಂಬಿಕೊಂಡು ಆಕ್ರೋಶದಿಂದ ಮಾತನಾಡಿದ ಆ ಯುವಕ, ರಸ್ತೆಗಳು ಗುಂಡಿಗಳಿಲ್ಲದೆ ಸರಿಯಾಗಿದ್ದಿದ್ದರೆ, ಪುರಸಭೆಯ ಕಾರ್ಮಿಕರು ಸರಿಯಾಗಿ ಅವರ ಕೆಲಸ ಮಾಡಿದ್ದರೆ, ಈ ನೀರು ಹೀಗೆ ನಿಲ್ಲುತ್ತಿತ್ತೇ? ನನ್ನ ಫೋನ್ ಕಳೆದುಹೋಗುತ್ತಿತ್ತೇ? ಇಂತಹ ಜನರಿಂದಾಗಿ ಮತ್ತು ಅವ್ಯವಸ್ಥೆಯಿಂದಾಗಿ ನನ್ನಂತಹ ಜನರು ವಿಫಲರಾಗುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಸದ್ಯ ಯುವಕನ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅನೇಕ ನೆಟ್ಟಿಗರು ನಮ್ಮ ಫೋನ್‌ಗಳು ಕೂಡ ಕಳೆದುಹೋಗಿವೆ, ಹೋಗಿರುವುದು ಫೋನ್ ತಾನೇ? ಎಂದು ಸಮಾಧಾನ ಪಡಿಸಲು ಯತ್ನಿಸಿದ್ದಾರೆ. ಇನ್ನು ಕೆಲವರು ಅಧಿಕಾರಿಗಳನ್ನು ಶಪಿಸಿದರೆ, ಕೆಲವರು ದಾರಿಹೋಕರು ಸಹಾಯ ಮಾಡಬಹುದಿತ್ತು ಎಂದಿದ್ದಾರೆ. ಇನ್ನು ಕೆಲವರು ಇದು ಅವನ ಜೀವನೋಪಾಯವಾಗಿರಬಹುದು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಯಾರು ಏನೇ ಹೇಳಿದರೂ ಆ ಯುವಕನ ಕಣ್ಣೀರಿಗೆ ಅರ್ಥವಿದೆ ಎಂದು ಬಹುತೇಕರು ಕಾಮೆಂಟ್​ ಮಾಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net