VIDEO | ಭಾರೀ ಜಡಿಮಳೆ, ಊರಿನೊಳಗೆ ನೀರಿನ ಹೊಳೆ!

dharmshala
Published on

ಧರಂಶಾಲಾ : ಹಿಮಾಚಲ ಪ್ರದೇಶದಲ್ಲಿ ಭಾರೀ ಜಡಿಮಳೆ ಉಂಟಾಗಿರುವ ಕಾರಣ ಧರಂಶಾಲಾ ಪಟ್ಟಣದಲ್ಲಿ ಇಂದು ಜಲಪ್ರವಾಹ ಉಂಟಾಗಿದೆ. ಈ ಫ್ಲ್ಯಾಶ್​ ಫ್ಲಡ್​ನಿಂದಾಗಿ ಊರಿನ ಒಳಗೆ ನೀರಿನ ಹೊಳೆಗಳು ಹರಿಯುತ್ತಿದ್ದು, ವಾಹನಗಳು ಜಲಾವೃತಗೊಂಡು ಸಿಕ್ಕಿಹಾಕಿಕೊಳ್ಳುತ್ತಿವೆ. ಜನರಿಗೆ ರಸ್ತೆಯಲ್ಲಿ ಓಡಾಡಲು ಕಷ್ಟವಾಗಿದೆ ಎನ್ನಲಾಗಿದೆ.

ಪಟ್ಟಣದ ಭಗ್ಸು ನಾಗ್ ಪ್ರದೇಶದಲ್ಲಿ ಉಂಟಾಗಿರುವ ಪರಿಸ್ಥಿತಿಯ ವಿಡಿಯೋ ತುಣುಕನ್ನು ಎಎನ್​ಐ ಸುದ್ದಿ ಸಂಸ್ಥೆ ಶೇರ್ ಮಾಡಿದೆ.

ಈವರೆಗೆ ಯಾವುದೇ ಸಾವುನೋವಿನ ವರದಿ ಬಂದಿಲ್ಲ. ಎಲ್ಲಾ ಡಿಸಿಗಳು ಮತ್ತು ಎಸ್ಪಿಗಳಿಗೆ ಜಾಗರೂಕವಾಗಿದ್ದು, ಪ್ರವಾಸಿ ತಾಣಗಳನ್ನು ನಿಯಂತ್ರಿಸುವಂತೆ ಸೂಚಿಸಲಾಗಿದೆ ಎಂದು ರಾಜ್ಯದ ಸಿಎಂ ಜೈರಾಂ ಠಾಕೂರ್​ ಹೇಳಿದ್ದಾರೆ. ಹೈರಿಸ್ಕ್​ ಪ್ರದೇಶಗಳಿಗೆ ಹೋಗಬಾರದೆಂದು ಪ್ರವಾಸಿಗರಲ್ಲಿ ಮನವಿ ಮಾಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net