ಭಾರೀ ಮಳೆಯಿಂದಾಗಿ ಭೂಕುಸಿತ... ಕೊಚ್ಚಿಹೋದ ಮನೆಗಳು!

boh
Published on

ಕಾಂಗ್ರಾ : ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಎತ್ತರದ ಪ್ರದೇಶದಲ್ಲಿರುವ ಗ್ರಾಮವಾದ ಬೋಹ್​ನಲ್ಲಿ ಭೂಕುಸಿತವುಂಟಾಗಿದೆ. ಕನಿಷ್ಠ ಆರು ಮನೆಗಳು ಕೊಚ್ಚಿಹೋಗಿದ್ದು, 10 ಕ್ಕೂ ಹೆಚ್ಚು ಜನರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಭಾವಿಸಲಾಗಿದೆ.

ಧರಂಶಾಲಾದಿಂದ 45 ಕಿಲೋಮೀಟರ್ ದೂರದಲ್ಲಿರುವ ಶಹಪುರ ಉಪವಿಭಾಗ ವ್ಯಾಪ್ತಿಯ ಬೋಹ್​ ಗ್ರಾಮಕ್ಕೆ ರೆಸ್ಕ್ಯೂ ಟೀಂಗಳು ತೆರಳಿವೆ. ಆದರೆ ಭೂಕುಸಿತದಿಂದ ರಸ್ತೆಗಳು ಬ್ಲಾಕ್​ ಆಗಿರುವುದರಿಂದ ತಲುಪುವಲ್ಲಿ ವಿಳಂಬವಾಗುತ್ತಿದೆ ಎಂದು ಕಾಂಗ್ರಾ ಜಿಲ್ಲೆ ಡಿಸಾಸ್ಟರ್ ಮ್ಯಾನೇಜ್​ಮೆಂಟ್ ಅಥಾರಿಟಿಯ ಸಂಚಾಲಕ ಭಾನು ಶರ್ಮ ಹೇಳಿದ್ದಾರೆ.

“ವಾಯುಯಾನದ ಮೂಲಕ ಸಂರಕ್ಷಕ ತಂಡವನ್ನು ಕಳುಹಿಸಲು ಇಂಡಿಯನ್​ ಏರ್​ ಫೋರ್ಸ್​ಗೆ ಮನವಿ ಮಾಡಿದ್ದೇವೆ. ಆದರೆ ಕೆಟ್ಟ ಹವಾಮಾನದಿಂದಾಗಿ ಅದು ಹಾಲಿ ಸಾಧ್ಯವಾಗುವುದಿಲ್ಲ” ಎಂದಿರುವ ಶರ್ಮ, ಪೊಲೀಸ್​ ತಂಡವೊಂದು ನಡೆದುಕೊಂಡೇ ಬೋಹ್​ ಗ್ರಾಮವನ್ನು ತಲುಪುವ ಪ್ರಯತ್ನ ಮಾಡುತ್ತಿದೆ. ಅಲ್ಲಿ ಉಂಟಾಗಿರುವ ಯಾವುದೇ ಸಾವುನೋವಿನ ಬಗ್ಗೆ ಆ ತಂಡ ತಲುಪಿದ ಮೇಲೆ ತಿಳಿದುಬರಲಿದೆ ಎಂದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net