

ನವದೆಹಲಿ: ಮನುಷ್ಯರು ಮೊಸಳೆಗಳ ಹತ್ತಿರ ಹೋಗಲೂ ಭಯ ಪಡುತ್ತಾರೆ. ಕಾರಣ ಅದು ಮಾಂಸಾಹಾರಿ ಪ್ರಾಣಿ. ಸ್ವಲ್ಪ ಎಡವಟ್ಟಾದರೂ ಮನುಷ್ಯರನ್ನೇ ತಿಂದು ಹಾಕಿ ಬಿಡುತ್ತವೆ. ಮೊಸಳೆಗಳು ಮನುಷ್ಯರನ್ನೇ ಆಹಾರವನ್ನಾಗಿಸಿದ ಸಾಕಷ್ಟು ಘಟನೆಗಳು ಈ ಹಿಂದೆ ನಡೆದಿವೆ. ಹೀಗಾಗಿ ಮೃಗಾಲಯಗಳಲ್ಲಿ ಮಾತ್ರ ಮೊಸಳೆಗಳು ನೋಡುವುದಕ್ಕೆ ಚಂದ!
ಆದರೆ ಇಲ್ಲೊಬ್ಬ ವ್ಯಕ್ತಿ ಯಾವುದೇ ಭಯವಿಲ್ಲದೆ ಮೊಸಳೆಗಳಿಗೆ ಊಟ ನೀಡುತ್ತಿದ್ದಾನೆ. ಅಚ್ಚರಿಯಾದರೂ ಸತ್ಯ. ದೋಣೆ ಮೇಲೆ ಕುಳಿತುಕೊಂಡು ಮೊಸಳೆಗಳಿಗೆ ಆಹಾರ ನೀಡಿದ್ದಾನೆ. ಸಾಕು ಪ್ರಾಣಿಗಳನ್ನು ಹೇಗೆ ಮುದ್ದಿಸಿ ಊಟ ನೀಡುತ್ತೇವೆಯೋ ಅದೇ ಮಾದರಿಯಲ್ಲಿ ಮೊಸಳೆಯನ್ನು ಸತ್ಕರಿಸಿದ್ದಾನೆ. ಅಲ್ಲದೆ ಮೊಸಳೆಯ ತಲೆ ಸವರಿ ಮುದ್ದಿಸಿದ್ದಾನೆ. ಈತ ಕೊಟ್ಟ ಆಹಾರವನ್ನು ತಿಂದು ಮೊಸಳೆ ಸಲೀಸಾಗಿ ಮುಂದೆ ಸಾಗಿದೆ.
ಸದ್ಯ ಫ್ಲೋರಿಡಾ ಈತ ಮೊಸಳೆಯನ್ನು ಮುದ್ದಿಸಿ ಆಹಾರ ನೀಡಿ ಸತ್ಕರಿಸಿದ ವಿಡಿಯೋ ಟ್ವಿಟರ್ನಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇದನ್ನು ನೋಡಿದ ಜನರು ಭಯ ಪಟ್ಟುಕೊಂಡಿದ್ದು, ಈತನ ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ. ಈ ವಿಡಿಯೋವನ್ನು ಈಗಾಗಲೇ 20 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. (ಏಜೆನ್ಸೀಸ್)