

ಹೈದರಾಬಾದ್ : ವಾಹನ ಸಂಚಾರ ಹೆಚ್ಚಿರುವ ಕೇಬಲ್ ಬ್ರಿಡ್ಜ್ನ ನಡುವಿನಲ್ಲಿ ವ್ಯಕ್ತಿಯೊಬ್ಬ ಡ್ಯಾನ್ಸ್ ಮಾಡುತ್ತಾ ವಿಡಿಯೋ ತೆಗೆಸಿಕೊಂಡಿರುವ ಪ್ರಸಂಗ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯದ ವಿಡಿಯೋ ತುಣುಕನ್ನು ಟ್ವಿಟರ್ನಲ್ಲಿ ಶೇರ್ ಮಾಡಿರುವ ತೆಲಂಗಾಣದ ಸೈಬರಾಬಾದ್ ಸಂಚಾರಿ ಪೊಲೀಸರು, ರಸ್ತೆಯಲ್ಲಿ ಈ ರೀತಿ ಸಾಹಸಗಳನ್ನು ಮಾಡಲು ಪ್ರಯತ್ನಿಸಬೇಡಿ ಎಂದು ಎಚ್ಚರಿಸಿದ್ದಾರೆ.
ವಿಡಿಯೋದಲ್ಲಿ - ಕಾರುಗಳು ವೇಗವಾಗಿ ಹಾದುಹೋಗುತ್ತಿರುವ ಹೈದರಾಬಾದಿನ ದುರ್ಗಮ್ ಚೆರುವು ಕೇಬಲ್ ಸೇತುವೆಯನ್ನು ಪುರುಷನೊಬ್ಬ ದಾಟುತ್ತಾನೆ. ನಂತರ ರಸ್ತೆ ಮಧ್ಯಕ್ಕೆ ಹೋಗಿನಿಂತು ಡ್ಯಾನ್ಸ್ ಮಾಡುತ್ತಾನೆ. ರಸ್ತೆಬದಿಯಲ್ಲಿ ನಿಂತು ವಿಡಿಯೋ ಮಾಡುತ್ತಿರುವ ತನ್ನ ಜೋಡಿದಾರನಿಗೆ ಪೋಸ್ ಕೊಡುತ್ತಾನೆ.
"ಮೋಜಿಗಾಗಿ, ರಸ್ತೆಯ ಮೇಲೆ ಸ್ಟಂಟ್ ಮತ್ತು ಡ್ಯಾನ್ಸ್ ಮಾಡಬೇಡಿ. ಇದು ಪ್ರಾಣಕ್ಕೆ ಅಪಾಯಕಾರಿ" ಎಂದು ಎಚ್ಚರಿಕೆ ನೀಡಿ ಶೇರ್ ಮಾಡಲಾಗಿದೆ. (ಏಜೆನ್ಸೀಸ್)