ವಿಡಿಯೋ ವೈರಲ್​: ಪಶ್ಚಿಮ ಬಂಗಾಳ ಬಿಜೆಪಿ ಅಭ್ಯರ್ಥಿ ಪ್ರಣತ್ ತುಡು ಅವರ ಮೇಲೆ ಕಲ್ಲು ತೂರಾಟ

wc
Published on

ಕೊಲ್ಕತ್ತಾ: ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನ ಇಂದು ನಡೆಯುತ್ತಿದ್ದು, ಪಶ್ಚಿಮ ಬಂಗಾಳದ ಜಾರ್‌ಗ್ರಾಮ್‌ನ ಬಿಜೆಪಿ ಪ್ರಣತ್ ತುಡು ಮತ್ತು ಭದ್ರತಾ ಸಿಬ್ಬಂದಿ ಮೇಲೆ ಮೇಲೆ ಪಶ್ಚಿಮ ಮಿಡ್ನಾಪುರದ ಮಂಗಲಪೋಟಾದಲ್ಲಿ ಜನ ಕಲ್ಲು ತೂರಾಟ ನಡೆಸಿದ್ದಾರೆ.

ಪ್ರಣತ್ ತುಡು ಅವರನ್ನು ರಕ್ಷಿಸಲು ಭದ್ರತಾ ಸಿಬ್ಬಂದಿ ಶೀಲ್ಡ್‌ಗಳನ್ನು ಹಿಡಿದುಕೊಂಡು ಕರೆದೊಯ್ದಿದ್ದಾರೆ. ಅಭ್ಯರ್ಥಿಯ ಮೇಲೆ ಕಲ್ಲು ತೂರಾಟ ನಡೆಸುತ್ತಿರುವ ವಿಡಿಯೋ ಸೆರೆಯಾಗಿದೆ. ಮಾಧ್ಯಮ ಪ್ರತಿನಿಧಿಗಳು, ಭದ್ರತಾ ಸಿಬ್ಬಂದಿ ಹಾಗೂ ಬಿಜೆಪಿ ಅಭ್ಯರ್ಥಿ ಸ್ಥಳದಿಂದ ಪರಾರಿಯಾಗುತ್ತಿರುವುದು ದೃಶ್ಯದಲ್ಲಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮತಗಟ್ಟೆಯ ಹೊರಗೆ ಮತ ಚಲಾಯಿಸಲು ಕಾಯುತ್ತಿದ್ದ ಮಹಿಳೆಗೆ ಬಿಜೆಪಿ ಅಭ್ಯರ್ಥಿ ಪ್ರಣತ್ ತುಡು ಮತ್ತು ಅವರ ಭದ್ರತಾ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ. ಇದು ಪ್ರತಿಭಟನೆಗೆ ಕಾರಣವಾಯಿತು ಎಂದು ತೃಣಮೂಲ ಕಾಂಗ್ರೆಸ್ ಆರೋಪ ಮಾಡಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಪ್ರಣತ್ ತುಡು, ಪಕ್ಷದ ಏಜೆಂಟರನ್ನು ಮತಗಟ್ಟೆ ಒಳಗೆ ಬಿಡುತ್ತಿಲ್ಲ ಎಂಬ ಮಾಹಿತಿ ಮೇರೆಗೆ ಕೆಲವು ಮತಗಟ್ಟೆಗಳಿಗೆ ಭೇಟಿ ನಿಡುತ್ತಿದ್ದೆ. ಈ ವೇಳೆ ರಸ್ತೆಗಳನ್ನು ತಡೆದ ಟಿಎಂಸಿ ಗೂಂಡಾಗಳು ನನ್ನ ಕಾರಿಗೆ ಇಟ್ಟಿಗೆಗಳನ್ನು ಎಸೆಯಲು ಪ್ರಾರಂಭಿಸಿದರು. ನನ್ನ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ಅವರು ಗಾಯಗೊಂಡರು. ನನ್ನ ಜೊತೆಗಿದ್ದ ಇಬ್ಬರು ಭದ್ರತಾ ಸಿಬ್ಬಂದಿ ತಲೆಗೆ ಗಾಯಗೊಂಡು ಆಸ್ಪತ್ರೆಗೆ ಸೇರಿಸಬೇಕಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.

ಮಾಧ್ಯಮದವರು ವಾಹನಗಳನ್ನೂ ಟಿಎಂಸಿ ಗೂಂಡಾಗಳು ಧ್ವಂಸಗೊಳಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸ್ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.  ಈ ಬಾರಿ ತುಡು, ತೃಣಮೂಲ ಕಾಂಗ್ರೆಸ್‌ನ ಕಲಿಪಾದ ಸೊರೆನ್ ಮತ್ತು ಸಿಪಿಎಂನ ಸೋನಾಮಮು ಮುರ್ಮು (ತುಡು) ನಡುವೆ ಸ್ಪರ್ಧೆ ಏರ್ಪಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net