

ಬೆಹ್ರಾಂಪುರ: ಇಲ್ಲಿಗೆ ಸಮೀಪದ ಸೋನಾಪುರ ಬೀಚ್ನ ದಂಡೆ ಮೇಲೆ ಸೋಮವಾರ ಬೃಹತ್ ಗಾತ್ರದ ಮೀನೊಂದು ಪತ್ತೆಯಾಗಿದ್ದು ಜನರ ಕುತೂಹಲಕ್ಕೆ ಕಾರಣವಾಗಿತ್ತು.
ಬೆಳಗ್ಗೆ ಕೆಲವರು ಮೀನುಗಾರಿಕೆಗೆ ಕಡಲಿನ ಕಡೆಗೆ ಹೊರಟಿದ್ದರೆ, ಇನ್ನು ಕೆಲವರು ಬೆಳಗ್ಗಿನ ವಾಕಿಂಗ್ಗೆ ಕಡಲತಡಿಗೆ ಬಂದಿದ್ದರು. ಎಲ್ಲರ ಗಮನ ಸೆಳೆದಿತ್ತು ಆ ಮೀನು. ಅಲೆಗಳ ಜತೆಗೆ ತೇಲಿ ಬಂದ ಆ ಮೀನನ್ನು ಮತ್ತೆ ಕಡಲಿನಾಳಕ್ಕೆ ಕಳುಹಿಸುವ ಪ್ರಯತ್ನವನ್ನು ಅಲ್ಲಿದ್ದವರು ಮಾಡಿದ್ದರು. ಆದರೆ ಪ್ರಯೋಜನವಾಗಲಿಲ್ಲ.
ಇಷ್ಟಕ್ಕೂ ಆ ಮೀನು ವೇಲ್ ಶಾರ್ಕ್ ಜಾತಿಗೆ ಸೇರಿದ್ದಾಗಿತ್ತು. ಇವುಗಳ ಜೀವಿತಾವಧಿ 70 ವರ್ಷ. ಕಡಲಿನಲ್ಲಿ ನಿಧಾನವಾಗಿ ಚಲಿಸುವ ಇವುಗಳ ಪೈಕಿ ಬೃಹತ್ ಗಾತ್ರದ್ದು ಎಂದರೆ 62 ಅಡಿ ಉದ್ದ ಇರುತ್ತವೆ. ಮನುಷ್ಯರಿಗೆ ಇದರಿಂದ ಯಾವುದೇ ಹಾನಿ ಇಲ್ಲ. ವೇಲ್ ಶಾರ್ಕ್ ಬಗ್ಗೆ ತಿಳಿದುಕೊಳ್ಳಲು ಕೆಳಗಿನ ವಿಡಿಯೋ ವೀಕ್ಷಿಸಬಹುದು.