ಗಟ್ಟಿಯಾದ ನಿಲುವುಗಳಿಂದ ಗೆಲುವು ಸಾಧ್ಯ

rotary
ರೋಟರಿ ಕ್ಲಬ್ ಶಿವಮೊಗ್ಗ ಆಯೋಜಿಸಿದ್ದ ವಾರದ ಅತಿಥಿ ಕಾರ್ಯಕ್ರಮದಲ್ಲಿ ಗೋಪಾಲ್ ಯಡಗೆರೆ ಅವರನ್ನು ಸನ್ಮಾನಿಸಲಾಯಿತು. ಕೆ.ಸೂರ್ಯನಾರಾಯಣ ಉಡುಪ. ಎನ್.ಜಿ.ಉಷಾ ಇತರರಿದ್ದರು.
Published on

ಶಿವಮೊಗ್ಗ: ಎಲ್ಲ ಕ್ಷೇತ್ರಗಳಲ್ಲಿ ಸೋಲಿನ ಅನುಭವ ಎದುರಾಗುತ್ತದೆ. ಸೋಲುಗಳಿಗೆ ಹೆದರದೆ ನಿರಂತರ ಪರಿಶ್ರಮ ವಹಿಸಿ ಗೆಲುವು ನಮ್ಮದಾಗಿಸಿಕೊಳ್ಳಬೇಕು ಎಂದು ಪತ್ರಕರ್ತ ಗೋಪಾಲ್ ಯಡಗೆರೆ ಅಭಿಪ್ರಾಯಪಟ್ಟರು.

ರೋಟರಿ ಕ್ಲಬ್ ಶಿವಮೊಗ್ಗ ಆಯೋಜಿಸಿದ್ದ ವಾರದ ಅತಿಥಿ ಕಾರ್ಯಕ್ರಮದಲ್ಲಿ ಸೋಲನ್ನು ಸೋಲಿಸಿ ವಿಷಯ ಕುರಿತು ಮಾತನಾಡಿ, ಒಂದು ಸೋಲು ನಮ್ಮನ್ನು ಕಂಗೆಡಿಸಬಹುದು. ಆದರೆ ಸೋತಾಗ ಎದ್ದು ನಿಲ್ಲುವ ಪ್ರಯತ್ನವೇ ನಮ್ಮನ್ನು ಗೆಲ್ಲಿಸುವ ಹಾದಿಗೆ ತಂದು ನಿಲ್ಲಿಸುತ್ತದೆ ಎಂದು ತಿಳಿಸಿದರು.

ಹಠ, ಶ್ರಮ, ಬದ್ಧತೆ, ಧೆರ್ಯ, ಗೆಲ್ಲುವ ಛಲ ಇದ್ದರೆ ಗೆಲುವು ನಮ್ಮದಾಗುತ್ತದೆ. ಸೋಲನ್ನು ಸೋಲಿಸುವುದು ಒಂದೆಡೆಯಾದರೆ, ಸೋಲೇ ನಮ್ಮ ಬಳಿ ಸುಳಿಯದಂತೆ ಗೆಲುವಿನ ಗೋಡೆ ಕಟ್ಟುವುದು ಇನ್ನೊಂದು ಆಯಾಮ ಎಂದರು.

ಶಿರಸಿಯ ಗೌರಿ ಎಂಬ ಮಹಿಳೆ ತಮ್ಮ ಊರಿನ ಅಂಗನವಾಡಿ ಮಕ್ಕಳಿಗೆ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಅಧಿಕಾರಿಗಳು ನೀಡಿದ ಕಿರುಕುಳದ ನಡುವೆಯೂ ಏಕಾಂಗಿಯಾಗಿ ಬಾವಿ ತೋಡಿ ನೀರುಣಿಸಿದ ಕಥೆ ನಮಗೆ ಆದರ್ಶವಾಗಬೇಕು ಎಂದು ತಿಳಿಸಿದರು.

ರೋಟರಿ ಅಧ್ಯಕ್ಷ ಕೆ.ಸೂರ್ಯನಾರಾಯಣ ಉಡುಪ, ಕಾರ್ಯದರ್ಶಿ ಎನ್.ಜಿ.ಉಷಾ ಸೂರ್ಯನಾರಾಯಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net