ಕುಸ್ತಿಯಲ್ಲಿ ಪ್ರಕಾಶ್ ಪಾಟೀಲ್‌ಗೆ ಗೆಲುವು

40
Published on


ಮೈಸೂರು: ರೋಚಕತೆಯಿಂದ ಕೂಡಿದ ದಸರಾ ಮಹೋತ್ಸವದ ಮೊದಲ ದಿನದ ಎರಡನೇ ಮಾರ್ಫಿಟ್ ಕುಸ್ತಿಯಲ್ಲಿ ಬೆಳಗಾವಿಯ ಪೈ.ಪ್ರಕಾಶ್ ಪಾಟೀಲ್ ಇಂಗಳಿಗಿ ಗೆಲುವಿನೊಂದಿಗೆ ವಿಜೃಂಭಿಸಿದರು.
ಒಂದು ಗಂಟೆ ನಿಗದಿಯಾಗಿದ್ದ ಕುಸ್ತಿಯಲ್ಲಿ ತನ್ನ ಎದುರಾಳಿ ದಾವಣಗೆರೆಯ ಪೈ.ಬಸವರಾಜ್ ಪಾಟೀಲ್ ಅವರನ್ನು 19.50 ನಿಮಿಷದಲ್ಲಿ ಚಿತ್‌ಮಾಡಿ ಮಟ್ಟಿ ಮೇಲೆ ಮೆರೆದಾಡಿದರು.
ಮತ್ತೊಂದು ಕುಸ್ತಿಯಲ್ಲಿ ಇಸ್ಕಿಯಾನ್ ಗರಡಿಯ ಪೈ.ಸಯ್ಯದ್ ಹುಸೇನ್ ಜಯ ಸಾಧಿಸಿದರು. ತನ್ನ ಎದುರಾಳಿ ಮೇದರಗೇರಿ ಗರಡಿ ಪೈ.ಸೂರಿ ಅವರು 5 ನಿಮಿಷದಲ್ಲಿ ಚಿತ್ ಮಾಡಿದರು.
ಪೈ.ಎಂ.ಪ್ರದೀಪ್ ತನ್ನ ಎದುರಾಳಿ ಪೈ. ದ್ಯಾವನಗೌಡ ಎಸ್.ಇನಾಮತಿ ಅವರನ್ನು 1.30 ನಿಮಿಷದಲ್ಲಿಯೇ ಚಿತ್ ಮಾಡಿ ಸಂಭ್ರಮಿಸಿದರೆ ಮತ್ತೊಂದು ಕುಸ್ತಿಯಲ್ಲಿ ಪೈ.ಬೈರಪ್ಪ ನಾಯಕ 2.20 ನಿಮಿಷದಲ್ಲಿ ಪೈ.ಕಿರಣ್‌ಗೌಡರನ್ನು ಸೋಲಿಸಿ ಆರ್ಭಟಿಸಿದರು.
ಪೈ.ಮೊಹಮ್ಮದ್ ಸಾಕೀಬ್ ಬೇಗ್ 1.37 ನಿಮಿಷದಲ್ಲಿ ತನ್ನ ಎದುರಾಳಿ ಪೈ.ಆರ್.ಯುವರಾಜ್ ಅವರನ್ನು ನೆಲಕ್ಕುರುಳಿಸಿ ಜಯ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net