ಶಾರುಖ್ ಜತೆಗೆ ವಿಕ್ಕಿ ಕೌಶಲ್ ತೆಗೆಸಿಕೊಂಡಿದ್ದ ಫೋಟೋ ವೈರಲ್

Vikky Kushal
Published on

ನವ ದೆಹಲಿ: ಹಿಂದಿ ಚಿತ್ರರಂಗದ ಜನಪ್ರಿಯ ನಟರಾದ ವಿಕ್ಕಿ ಕೌಶಲ್ ಹಾಗೂ ಅವರ ಸಹೋದರ ಸನ್ನಿ ಕೌಶಲ್ 22 ವರ್ಷಗಳ ಹಿಂದೆ ಶಾರೂಖ್ ಖಾನ್ ಜತೆಗೆ ತೆಗೆಸಿಕೊಂಡಿದ್ದ ಫೋಟೋವೊಂದನ್ನು ಅವರ ತಂದೆ ಸಾಹಸ ನಿರ್ದೇಶಕ ಶ್ಯಾಮ್ ಕೌಶಲ್ ಅವರು ತಮ್ಮ ಇನ್ಸ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

2001ರಲ್ಲಿ ಐತಿಹಾಸಿಕ ಚಲನಚಿತ್ರ ಅಶೋಕ ಸಿನಿಮಾ ಶೂಟಿಂಗ್​ ನಡೆಯುತ್ತಿದ್ದ ಜಾಗಕ್ಕೆ ತಂದೆಯ ಜತೆ ವಿಕ್ಕಿ ಕೌಶಲ್ ಹಾಗೂ ಸನ್ನಿ ಕೌಶಲ್ ತೆರಳಿದ್ದರು. ಈ ವೇಳೆ ನಾಯಕ ನಟ ಶಾರೂಖ್ ಖಾನ್ ಜತೆಗೆ ಫೋಟೋ ತೆಗೆಸಿಕೊಂಡಿದ್ದರು. ಇದೀಗ ಈ ಫೋಟೋ ಇನ್ಸ್​ಟಾಗ್ರಾಂನಲ್ಲಿ ಪೋಸ್ಟ್ ಆಗಿದ್ದು, ವೈರಲ್ ಆಗುತ್ತಿದೆ.

"ದೇವರ ದಯೆಯಿಂದ, ಈ ಫೋಟೋವನ್ನು 2001 ರಲ್ಲಿ ಫಿಲ್ಮ್ ಸಿಟಿಯಲ್ಲಿ ಅಶೋಕ ಚಿತ್ರದ ಚಿತ್ರೀಕರಣದ ವೇಳೆ ತೆಗೆಯಲಾಗಿದೆ. ಈ ಸಮಯದಲ್ಲಿ ವಿಷ್ಣು ವರ್ಧನ್ ಸಹಾಯಕ ನಿರ್ದೇಶಕರಾಗಿದ್ದರು. ವಿಕ್ಕಿ ಕೌಶಲ್ 8 ನೇ ತರಗತಿಯಲ್ಲಿ ಓದುತ್ತಿದ್ದರು. ಮುಂದೊಂದು ದಿನ ಪುತ್ರರಿಬ್ಬರು ಚಿತ್ರರಂಗಕ್ಕೆ ಬರುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. 2022ರಲ್ಲಿ ಸನ್ನಿ ಕೌಶಲ್ ಶೇರ್​ ಷಾ ಚಿತ್ರಕ್ಕೆ ಅತ್ಯುತ್ತಮ ನಿರ್ದೇಶಕ ಹಾಗೂ ಮತ್ತು ವಿಕ್ಕಿ ಕೌಶಲ್ ಸರ್ದಾರ್ ಉಧಮ್‌ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದಿದ್ದಾರೆ. ಇದು ದೇವರ ಆಶೀರ್ವಾದ ಎಂದು ತಮ್ಮ ಮಕ್ಕಳಿಬ್ಬರ ಬಗ್ಗೆ ಹೆಮ್ಮೆಯಿಂದ ಶ್ಯಾಮ್ ಕೌಶಲ್ ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net