

ಆನೆ ನಡೆದದ್ದೆ ದಾರಿ ಎಂಬ ನಾಣ್ಣುಡಿ ಇದೆ. ಆನೆ ಕಾಡಿನ ರಾಜನಲ್ಲದಿದ್ದರೂ, ಕಾಡಿನ ರಾಜನಿಗಿಂತ ಶಕ್ತಿಯಲ್ಲಿ ಕಡಿಮೆ ಇಲ್ಲ, ಆದರೆ ಸಿಂಹ ಅಥವಾ ಚಿರತೆಗಿರುವಷ್ಟು ಚುರುಕು ಬುದ್ಧಿ ಇಲ್ಲ. ಮನುಷ್ಯರೂ ಸಹ ಆನೆಯ ಶಕ್ತಿಯನ್ನು ಅರಿತು ಅದರಿಂದ ದೂರ ಓಡುತ್ತಾರೆ. ಅದೇ ಆನೆ ಮೋಜಿನ ಮೂಡ್ನಲ್ಲಿದ್ದರೆ ಮಾತ್ರ ನೋಡಲು ಬಹಳ ಖುಷಿಯಾಗುತ್ತದೆ. ಸದ್ಯ ಅಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್(Viarl Video) ಆಗುತ್ತಿದೆ.
ವೈರಲ್ ವಿಡಿಯೋದಲ್ಲಿ ಬಸ್ಸಿನಲ್ಲಿ ಕಿಟಕಿ ಬಳಿ ಪ್ರಯಾಣಿಕರೊಬ್ಬರು ಕುಳಿತಿರುವುದನ್ನು ಕಾಣಬಹುದು. ಸೈಲೆಂಟಾಗಿ ಪಕ್ಕದಲ್ಲೇ ಬಂದ ಆನೆ ತನ್ನ ಸೊಂಡಿಲನ್ನು ಕಿಟಕಿ ಒಳಗೆ ಹಾಕುತ್ತದೆ. ಇದರಲ್ಲಿ ಅಲ್ಲಿ ಕುಳಿತಿದ್ದ ಪ್ರಯಾಣಿಕನಿಗೆ ಆನೆ ಯಾವುದೇ ತೊಂದರೆ ಮಾಡುವುದಿಲ್ಲ. ಆನೆ ಇನ್ನೂ ಹತ್ತಿರಬದ್ದಂತೆ ಅಲ್ಲಿ ಕುಳಿತಿದ್ದ ಪ್ರಯಾಣಿಕ ಹೆದರಿ ಅಲ್ಲಿಂದು ಹೋಗುತ್ತಾರೆ. ಇನ್ನೊಬ್ಬ ವ್ಯಕ್ತಿ ಬಂದು ಆನೆಯ ಸೊಂಡಿಲನ್ನು ಹಿಡಿದು ಹಿಂದಕ್ಕೆ ತಳ್ಳುವುದನ್ನು ನೋಡಬಹುದು. ಬಳಿಕ ಅಲ್ಲಿಂದ ಆನೆ ಹೋಗುತ್ತದೆ.
ಆನೆಯ ಮೋಜಿನ ಈ 30 ಸೆಕೆಂಡ್ಗಳ ವಿಡಿಯೋವನ್ನು ಇದುವರೆಗೂ 45 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು ಹಲವರು ಪ್ರತಿಕ್ರಿಯಿಸಿದ್ದಾರೆ. ಆನೆಗೆ ಹಸಿವಾಗಿರಬಹುದು, ಆನೆ ಆಹಾರ ಹರಸಿ ಬಂದಿದೆ, ಗಜರಾಜನು ತನ್ನ ಆಹಾರವನ್ನು ಹುಡುಕುತ್ತಾ ಬಸ್‌ನೊಳಗೆ ಸೊಂಡಿಲನ್ನು ತೂರಿಸಿದೆ, ಇದು ನಿಜವಾಗಿಯೂ ಅಪಾಯಕಾರಿ ಎಂದು ಕಾಮೆಂಟ್ ಮಾಡಿದ್ದಾರೆ.