'ನೈಜ ಅಯೋಧ್ಯೆ ನೇಪಾಳದಲ್ಲಿದೆ...' ಓಲಿ ಮಾತಿಗೆ ವಿಎಚ್​ಪಿ ಹೇಳಿದ್ದೇನು?

Alok-Kumar-VHP.jpeg-copy
Published on

ನವದೆಹಲಿ: ನಿಜವಾದ ಅಯೋಧ್ಯೆ ನೇಪಾಳದಲ್ಲಿದೆ. ಶ್ರೀರಾಮ ನೇಪಾಳದ ರಾಜಕುಮಾರ.... ಇಂಥದ್ದೊಂದು ಹೇಳಿಕೆ ಮೂಲಕ ಅಚ್ಚರಿ ಮೂಡಿಸಿದ್ದರು ನೇಪಾಳದ ಪ್ರಧಾನಿ ಕೆ.ಪಿ. ಶರ್ಮ.

ಈ ಹೇಳಿಕೆಗೆ ವಿಶ್ವದ ಬಹುತೇಕ ಕಡೆಗಳಿಂದ ಓಲಿ ವಿರೋಧ ಎದುರಿಸಬೇಕಾಯ್ತು. ಸದ್ಯ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದಲ್ಲಿ ಭಾಗಿಯಾಗಿರುವ ವಿಶ್ವ ಹಿಂದು ಪರಿಷದ್​ ಓಲಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದೆ.

ಭಾರತದೊಂದಿಗಿನ ನೇಪಾಳದ ಭಾವನಾತ್ಮಕ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸಂಬಂಧವನ್ನು ಹಾಳುಗಡೆವಲು ಪ್ರಧಾನಿ ಇಂಥ ವಿಚಿತ್ರ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವಿಎಚ್​ಪಿ ಅಧ್ಯಕ್ಷ ಅಲೋಕ್​ ಕುಮಾರ್​ ಹೇಳಿದ್ದಾರೆ.

ಓಲಿ ಭಾರತ ವಿರೋಧಿ ನಿಲುವು ತಮ್ಮದಾಗಿಸಿಕೊಂಡಿದ್ದಾರೆ. ಆದರೆ, ರಾಮನನ್ನು ನಂಬುವ ನೇಪಾಳದ ಭಕ್ತರು ಪ್ರಧಾನಿ ಹೇಳಿಕೆಯನ್ನು ಅಲ್ಲಗೆಳೆಯುತ್ತಾರೆ ಹಾಗೂ ಇಂಥ ಜಾಲದಲ್ಲಿ ಸಿಲುಕುವುದಿಲ್ಲ ಎಂದು ಹೇಳಿದ್ದಾರೆ.

ಓಲಿ ಹೇಳಿಕೆಗೆ ನೇಪಾಳದ ಜನರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದೊಂದು ಅನಾರೋಗ್ಯಕರ ಚಿಂತನೆ. ಪ್ರಧಾನಿಗೆ ಯಾವುದೇ ನಿರ್ಬಂಧಗಳಿಲ್ಲದೆ ಬಿಡುವುದು ಅಪಾಯಕಾರಿ ಕೂಡ ಎಂದು ಮಾಜಿ ಪ್ರಧಾನಿ ಬಾಬುರಾಮ್​ ಭಟ್ಟಾರೈ ಹೇಳಿದ್ದಾರೆ. ಒಟ್ಟಾರೆ, ಚೀನಾದ ಕೈಗೊಂಬೆಯಂತೆ ವರ್ತಿಸುತ್ತಿರುವ ಓಲಿ, ಭಾರತ ವಿರೋಧಿ ನಿಲುವನ್ನು ಪ್ರದರ್ಶಿಸುತ್ತಲೇ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net