ಬೆಂಗಳೂರಿಗೆ ಸೇಫ್​ ಆಗಿ ವಾಪಸ್ಸಾಗಿದ್ದಾರೆ ಜಯಂತಿ

Jayanthi Final
Published on

ಲಾಕ್‌ಡೌನ್‌ನಿಂದಾಗಿ ಕಮಲಾಪುರದಲ್ಲಿದ್ದ ಹಿರಿಯ ನಟಿ ‘ಅಭಿನಯ ಶಾರದೆ’ ಜಯಂತಿ ಅವರು ಸೋಮವಾರ ಸಂಜೆ ಬೆಂಗಳೂರಿಗೆ ಸೇಫ್​ ಆಗಿ ಬಂದು ತಲುಪಿದ್ದಾರೆ.

ಜಯಂತಿ ಅವರು ಮಗ ಕೃಷ್ಣ ಕುಮಾರ್ ಜತೆಗೆ ಹಂಪಿಯ ಕಮಲಾಪುರಂಗೆ ಫೆಬ್ರವರಿಯಲ್ಲಿ ಹೋಗಿದ್ದರು. ಈ ಮಧ್ಯೆ ಕಳೆದ ತಿಂಗಳು ಲಾಕ್‌ಡೌನ್ ಘೋಷಣೆಯಾದ್ದರಿಂದ, ಅವರು ವಾಪಸ್ಸು ಬೆಂಗಳೂರಿಗೆ ಬರುವುದಕ್ಕೆ ಸಾಧ್ಯವಾಗಲಿಲ್ಲ. ಇತ್ತೀಚಿನ ಕೆಲವು ವರ್ಷಗಳಲ್ಲಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರಿಂದ, ವೈದ್ಯರನ್ನು ಕರೆಸಿ ಪರೀಕ್ಷೆ ಮಾಡಿಸಲಾಗಿದೆ. ಅವರು ಅಲ್ಲಿದ್ದರೆ ಅನುಕೂಲವೋ, ವಾಪಸ್ಸು ಬೆಂಗಳೂರಿಗೆ ಕರೆದುಕೊಂಡು ಹೋಗಬೇಕೋ ಎಂಬುದರ ಬಗ್ಗೆ ಬೆಂಗಳೂರು ಮತ್ತು ಬಳ್ಳಾರಿಯ ತಜ್ಞ ವೈದ್ಯರನ್ನು ಕೇಳಲಾಗಿದೆ. 50 ದಿನಗಳಾದ್ದರಿಂದ ಬೆಂಗಳೂರಿಗೆ ಕರೆದುಕೊಂಡು ಹೋಗುವುದು ಒಳ್ಳೆಯದು ಎಂಬ ಅಭಿಪ್ರಾಯ ಬಂದಿದ್ದರಿಂದ, ಅವರನ್ನು ವಾಪಸ್ಸು ಬೆಂಗಳೂರಿಗೆ ಕರೆತರಲಾಗಿದೆ.

ಈ ಕುರಿತು ಮಾತನಾಡಿದ ಅವರ ಮಗ ಕೃಷ್ಣ ಕುಮಾರ್, ‘ಸೋಮವಾರ ಸಂಜೆ ಬೆಂಗಳೂರಿಗೆ ಬಂದು ತಲುಪಿದ್ದೇವೆ. ಬೆಂಗಳೂರಿಗೆ ವಾಪಸ್ಸು ಕರೆದುಕೊಂಡು ಬರುವಂತೆ ವೈದ್ಯರೇ ಹೇಳಿದ್ದರಿಂದ, ಸೂಕ್ತ ಅನುಮತಿ ಪಡೆದು ಬಂದಿದ್ದೇವೆ. ಇನ್ನು ಅಮ್ಮ ಅಸ್ತಮಾ ಪೇಶಂಟ್ ಆಗಿರುವುದರಿಂದ, ಮಾರ್ಗ ಮಧ್ಯೆ ಸಮಸ್ಯೆಯಾಗಬಾರದು ಎಂದು ಆ್ಯಂಬುಲೆನ್ಸ್ ಎಸ್ಕಾರ್ಟ್ ಪಡೆದು ಬಂದಿದ್ದೇವೆ. ಅಮ್ಮ ಹುಷಾರಾಗಿದ್ದಾರೆ. ಯಾವುದೇ ಸಮಸ್ಯೆ ಇಲ್ಲ’ ಎಂದು ಕೃಷ್ಣ ಕುಮಾರ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net