ಅಂದಿನ ಕಾಲಕ್ಕೆ ಅಮಿತಾಭ್ ಬಚ್ಚನ್ ಅವರನ್ನು ಬಿಟ್ಟರೆ ಧರ್ಮೇಂದ್ರ ಅವರದ್ದೇ ಬಾಲಿವುಡ್ನಲ್ಲಿ ಹವಾ. ನಾಯಕನಾಗಿ ಪಡೆದ ಎಲ್ಲಾ ಯಶಸ್ಸಿನ ಹೊರತಾಗಿಯೂ, ಅವರು ತಮ್ಮ ವೈವಾಹಿಕ ಜೀವನದಲ್ಲಿ ಮಾತ್ರ ಒಂದಷ್ಟು ವಿವಾದಗಳನ್ನು ಎದುರಿಸಿದರು. ಹಾಗಿದ್ದರೆ, ಚಿತ್ರರಂಗದಲ್ಲಿ ಅಪಾರ ಕೀರ್ತಿ, ಖ್ಯಾತಿ ಗಳಿಸಿದ ಧರ್ಮೇಂದ್ರ ಅವರು, ಯಾವ ವಿಚಾರಗಳಿಗೆ ವಿವಾದದಲ್ಲಿ ಸಿಲುಕಿದ್ದರು ಎಂಬುದರ ವಿವರ ಹೀಗಿದೆ ನೋಡಿ.