

ನವದೆಹಲಿ: ಇತ್ತೀಚೆಗೆ ವೈರಲ್ ಆಗಿರುವ ಮದುವೆಯ ಫೋಟೋ ವಿಚಿತ್ರ ಪ್ರಶ್ನೆಯನ್ನು ಹುಟ್ಟುಹಾಕಿದೆ. ಇದನ್ನು ನೋಡಿದ ಕೆಲವರು ವಧುವಿನ ಮದುವೆ ನಡೆದಿದ್ದು ಯಾರ ಜತೆಗೆ ಎಂಬ ಸಂಶಯ ವ್ಯಕ್ತಪಡಿಸುತ್ತಿದ್ದಾರೆ.
‘ನಾನು ಆಕೆಯನ್ನು ಬಂಗಾರಕ್ಕಿಂತ ಹೆಚ್ಚಾಗಿ ಪ್ರೀತಿಸಲು ಯತ್ನಿಸುತ್ತೇನೆ’ ಎಂಬ ಅಡಿಬರಹದೊಡನೆ ಮದುಮಗ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಫೋಟೋ ಅಪ್ಲೋಡ್ ಮಾಡಿದ್ದ.
ಈ ಫೋಟೋದಲ್ಲಿ ವಧು-ವರ, ಪುಸ್ತಕ ಹಿಡಿದು ಮದುವೆಯ ಪ್ರತಿಜ್ಞಾವಿಧಿಗಳನ್ನು ಬೋಧಿಸುತ್ತಿರುವ ಫಾದರ್ ಇದ್ದಾರೆ. ಜತೆಗೆ ಟೈ ಬಿಗಿದುಕೊಂಡ ಸುಂದರ ನಾಯಿಯೊಂದು ವಧುವಿನ ಕೈಗೆ ತನ್ನ ಮುಂಗಾಲು ಕೊಟ್ಟು ಆಕೆಯನ್ನೇ ದಿಟ್ಟಿಸುತ್ತಿದೆ. ಈ ಫೋಟೋ ನೋಡಿದ ವ್ಯಕ್ತಿಯೊಬ್ಬರು, ‘ಕ್ಷಮಿಸು ಗೆಳೆಯ(ವರ)! ಮದುವೆಗೆ ನೀನೇ ಸಾಕ್ಷಿ’ ಎಂದು ತಮಾಷೆಯ ಕಾಮೆಂಟ್ ಮಾಡಿದ್ದಾರೆ.