ಬಹೂಪಯೋಗಿ ಬಯೋಗ್ಯಾಸ್; ಕಟಮಾನದೊಡ್ಡಿಯಲ್ಲಿ ಮೊದಲ ಘಟಕಕ್ಕೆ ಭೂಮಿಪೂಜೆ

ರಾಮನಗರ ತಾಲೂಕು ಸುಗ್ಗನಹಳ್ಳಿ ಗ್ರಾಪಂ ವ್ಯಾಪ್ತಿಯ ಕಟಮಾನದೊಡ್ಡಿ ಗ್ರಾಮದಲ್ಲಿ ರೈತನೊಬ್ಬ ನಿರ್ಮಿಸುತ್ತಿರುವ ಜೈವಿಕ ಅನಿಲ ಸ್ಥಾವರಕ್ಕೆ ಜಿಪಂ ಉಪ ಕಾರ್ಯದರ್ಶಿ ಟಿ.ಕೆ.ರಮೇಶ್ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು. ಗ್ರಾಪಂ ಪಿಡಿಒ ಪ್ರದೀಪ್, ನರೇಗಾ ಅನುಷ್ಠಾನ ಅಧಿಕಾರಿ ರೂಪೇಶ್‌ಕುಮಾರ್, ಗ್ರಾಪಂ ಸದಸ್ಯರು ಇದ್ದರು.
ರಾಮನಗರ ತಾಲೂಕು ಸುಗ್ಗನಹಳ್ಳಿ ಗ್ರಾಪಂ ವ್ಯಾಪ್ತಿಯ ಕಟಮಾನದೊಡ್ಡಿ ಗ್ರಾಮದಲ್ಲಿ ರೈತನೊಬ್ಬ ನಿರ್ಮಿಸುತ್ತಿರುವ ಜೈವಿಕ ಅನಿಲ ಸ್ಥಾವರಕ್ಕೆ ಜಿಪಂ ಉಪ ಕಾರ್ಯದರ್ಶಿ ಟಿ.ಕೆ.ರಮೇಶ್ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು. ಗ್ರಾಪಂ ಪಿಡಿಒ ಪ್ರದೀಪ್, ನರೇಗಾ ಅನುಷ್ಠಾನ ಅಧಿಕಾರಿ ರೂಪೇಶ್‌ಕುಮಾರ್, ಗ್ರಾಪಂ ಸದಸ್ಯರು ಇದ್ದರು.
Published on

ರಾಮನಗರ: ನರೇಗಾ ಯೋಜನೆಯಲ್ಲಿ ಪ್ರಥಮ ಬಾರಿಗೆ ರೈತರ ಬಹೂಪಯೋಗಿ ಬಯೋ ಗ್ಯಾಸ್(ಜೈವಿಕ ಅನಿಲ) ಸ್ಥಾವರ ನಿರ್ಮಾಣಕ್ಕೆ ಜಿಲ್ಲಾ, ತಾಲೂಕು ಪಂಚಾಯಿತಿ ಒತ್ತು ನೀಡಿದ್ದು, ಯೋಜನೆ ಕಾರ್ಯಗತಗೊಳಿಸುವ ಮೂಲಕ ಯಶಸ್ಸು ಸಾಧಿಸಲು ಹೊರಟಿವೆ.

ಬಯೋಗ್ಯಾಸ್ ಘಟಕ ನಿರ್ಮಾಣ ಸುಲಭವಾಗಿದ್ದು, ಕಡಿಮೆ ಖರ್ಚಿನಲ್ಲಿ ಗ್ಯಾಸ್ ಉತ್ಪಾದಿಸಿ ಬಳಕೆ ಮಾಡಬಹುದಾಗಿದೆ. ಇದರಿಂದ ಪೆಟ್ರೊಲಿಯಂ ಗ್ಯಾಸ್ ಖರೀದಿಸುವ ಖರ್ಚು ಉಳಿಸಬಹುದಾಗಿದೆ. ಭೂಮಿಗೆ ಲವತ್ತತೆ ಕೊಡುವ ಎರೆಹುಳು ಗೊಬ್ಬರ ಘಟಕ ಸ್ಥಾಪಿಸಿ, ಮಿತವ್ಯಯಿ ರೈತಸ್ನೇಹಿ ಗೊಬ್ಬರ ತಯಾರಿಸಿ ಬಳಸಬಹುದಾಗಿದೆ ಎನ್ನುತ್ತಾರೆ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಧಿಕಾರಿಗಳು.

ಘಟಕಕ್ಕೆ ತಗಲುವ ವೆಚ್ಚ: ಒಂದು ಬಯೋಗ್ಯಾಸ್ ನಿರ್ಮಾಣಕ್ಕೆ 50 ಸಾವಿರ ರೂ. ವೆಚ್ಚವಾಗಲಿದೆ. ನರೇಗಾ ಯೋಜನೆ ಮೂಲಕ 15 ಸಾವಿರ ರೂ.ಕೂಲಿ ಹಣ, 10 ಸಾವಿರ ರೂ. ಸಾಮಗ್ರಿ ವೆಚ್ಚ ಸೇರಿ 25 ಸಾವಿರ ರೂ. ನೆರವು ಸಿಗಲಿದೆ. ಉಳಿದ 25 ಸಾವಿರ ರೂ.ಗಳನ್ನು ಫಲಾನುಭವಿಗಳೇ ಭರಿಸಬೇಕು. ಎರೆಹುಳು ತಟ್ಟೆ ನಿರ್ಮಾಣಕ್ಕಾಗಿ 27 ಸಾವಿರ ರೂ. ಸಹಾಯಧನ ಸಿಗಲಿದೆ.

ಗ್ರಾಮೀಣ ಮಹಿಳೆಯರಿಗೆ ಯೋಜನೆ ಪ್ರಯೋಜನಕಾರಿಯಾಗಿದೆ. 1, 2 ಅಥವಾ ಎರಡಕ್ಕಿಂತ ಹೆಚ್ಚು ಹಸು ಸಾಕುವವರು ಘಟಕ ನಿರ್ಮಿಸಿಕೊಂಡರೆ ಉಪಯೋಗವಾಗುತ್ತದೆ. ರೂಪೇಶ್‌ಕುಮಾರ್, ರಾಮನಗರ ತಾಲೂಕು ಅಧಿಕಾರಿ, ನರೇಗಾ ಅನುಷ್ಠಾನ ರಾಮನಗರ ತಾಲೂಕಿನಲ್ಲಿ 60 ಫಲಾನುಭವಿಗಳು ನರೇಗಾ ಯೋಜನೆ ಮೂಲಕ ಬಯೋಗ್ಯಾಸ್ ಘಟಕ ನಿರ್ಮಾಣಕ್ಕೆ ಹೆಸರು ನೋಂದಾಯಿಸಿದ್ದಾರೆ. ಜಿಲ್ಲೆಯಲ್ಲೇ ಪ್ರಥಮವಾಗಿ ರಾಮನಗರ ತಾಲೂಕು ಸುಗ್ಗನಹಳ್ಳಿ ಗ್ರಾಪಂ ವ್ಯಾಪ್ತಿಯ ಕಟಮಾನದೊಡ್ಡಿ ಗ್ರಾಮದಲ್ಲಿ ಯೋಜನೆಗೆ ಚಾಲನೆ ನೀಡಿದ್ದು, ಯೋಜನೆಯ ಲಾಭ ಪಡೆಯುವುದನ್ನು ಲಾನುಭವಿಗಳಿಗೆ ತಾಪಂ ತಿಳಿಸಿಕೊಡುತ್ತಿದೆ. ಪ್ರದೀಪ್, ತಾಪಂ ಇಒ ರಾಮನಗರ ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಂದು ಕುಟುಂಬಗಳು ಹೈನುಗಾರಿಕೆಯಲ್ಲಿ ತೊಡಗಿದ್ದು, ನರೇಗಾ ಯೋಜನೆಯ ಲಾಭ ಪಡೆದು, ಬಯೋಗ್ಯಾಸ್ ಘಟಕ ನಿರ್ಮಿಸಿಕೊಂಡರೆ ಅಡುಗೆಗೆ ಬೇಕಾದ ಗ್ಯಾಸ್ ಉತ್ಪಾದನೆ, ಎರೆಹುಳು ಗೊಬ್ಬರ ಉತ್ಪತ್ತಿ ಮಾಡಬಹುದಾಗಿದೆ. ಟಿ.ಕೆ.ರಮೇಶ್, ಜಿಪಂ ಉಪ ಕಾರ್ಯದರ್ಶಿ ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net