ವಿಐಟಿಯಲ್ಲಿ ಬಿಇ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ...! Vellore Institute of Technology

Vellore Institute of Technology
Published on

ಬೆಂಗಳೂರು: ವೆಲ್ಲೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ( Vellore Institute of Technology ) ಇಂಜಿನಿಯರಿಂಗ್ ವ್ಯಾಸಂಗ ಮಾಡಲು ಕನಸು ಕಾಣುತ್ತಿರುವ ಆಕಾಂಕ್ಷಿಗಳಿಂದ ಪ್ರವೇಶ ಪರೀಕ್ಷೆ ವಿಐಟಿಇಇಇ-2026ಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

www. viteee.vit.ac.in ಮೂಲಕ ಆನ್​ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು, ವೆಲ್ಲೂರು, ಚೆನ್ನೈ, ಅಮರಾವತಿ ಮತ್ತು ಭೋಪಾಲ್‌ನಲ್ಲಿರುವ ಕ್ಯಾಂಪಸ್​ಗಳಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡಬಹುದಾಗಿದೆ.

ವಿಐಟಿಇಇಇ-2026 ಅನ್ನು 2026ರ ಏಪ್ರಿಲ್ 28ರಿಂದ ಮೇ 3ರವರೆಗೆ ಒಂದೇ ಹಂತದಲ್ಲಿ ಹಮ್ಮಿಕೊಳ್ಳಲಾಗುತ್ತದೆ. ದೇಶಾದ್ಯಂತ 134 ನಗರಗಳಲ್ಲಿ ಮತ್ತು 9 ಅಂತಾರಾಷ್ಟ್ರೀಯ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುವುದು. ಇದು ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನ ಸ್ಥಳ ಅಥವಾ ಸ್ಥಳೀಯ ಪ್ರದೇಶದ ಆಧಾರದ ಮೇಲೆ ಸ್ಥಳ ಆಯ್ಕೆ ಮಾಡಲು ಸಹಾಯವಾಗಲಿದೆ.

ವಿಶ್ವ ದರ್ಜೆಯ ಮೂಲಸೌಕರ್ಯ, ಬಲವಾದ ಕೈಗಾರಿಕಾ ಸಂಪರ್ಕಗಳು ಮತ್ತು ಅತ್ಯುತ್ತಮ ಉದ್ಯೋಗಾವಕಾಶ ಇರುವುದರಿಂದ ಇಂಜಿನಿಯರಿಂಗ್ ಶಿಕ್ಷಣಕ್ಕಾಗಿ ದೇಶಾದ್ಯಂತ ಬೇಡಿಕೆಯ ತಾಣಗಳಲ್ಲಿ ವಿಐಟಿ ಒಂದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net