

ಅಣ್ಣ ತಮ್ಮಂದಿರರಲ್ಲಿ ತತ್ತ್ವಸಂಯೋಜನೆ ಮೊದಲಾದ ಉತ್ತರ ಕ್ರಿಯೆಗಳನ್ನು ನಿರ್ವಹಿಸುವ ಅಧಿಕಾರವು ಯಾರಿಗೆ ಇದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ವಯಸ್ಸಿನಲ್ಲಿ ಕಿರಿಯನಾದ ಅಥವಾ ಬೇರೊಬ್ಬ ಸೋದರನಿಂದ ಎಲ್ಲ ಪಿತೃ ಕರ್ಮಗಳು ಮಾಡಲ್ಪಟ್ಟಿದ್ದರೂ, ಹಿರಿಯ ಮಗನು ‘ಉದಕದಾನ’ ಮತ್ತು ತತ್ವಸಂಯೋಜನ ವಿಧಿಯನ್ನು ತಾನೂ ಮಾಡಬೇಕು. ಅಗ್ರಜನು ಅಂದರೆ, ಹಿರಿಯ ಅಣ್ಣನು ಪಿತೃಕರ್ಮವನ್ನು ಮಾಡಿದ ನಂತರ ಅನುಜನು ಅಂದರೆ, ಕಿರಿಯ ಸೋದರನು ಮತ್ತೊಮ್ಮೆ ಪಿತೃಕರ್ಮವನ್ನು ಆಚರಿಸಬೇಕಾದ ಅಗತ್ಯವಿರುವುದಿಲ್ಲ.
ಸಾಮಾನ್ಯವಾಗಿ ವ್ಯವಹಾರದಲ್ಲಿ ಮತ್ತು ಮನೆತನಕ್ಕೆ ಸಂಬಂಧಪಟ್ಟಿರುವ ಕೆಲಸ ಕಾರ್ಯಗಳಲ್ಲಿ ಹಿರಿಯ ಅಣ್ಣನಿಗೆ ವಿಶೇಷ ಮಹತ್ವವನ್ನು ನೀಡುವಂತೆ ಧಾರ್ವಿುಕ ವಿಧಿ ವಿಧಾನಗಳಲ್ಲಿ ಕೂಡ ಹಿರಿಯ ಅಣ್ಣನಿಗೆ ವಿಶೇಷ ಪ್ರಾಶಸ್ಱ. ತಂದೆಯ ಜೊತೆಗೆ ದೀರ್ಘ ಸಮಯ ಕಳೆದ ಅನುಭವ ಮತ್ತು ತಮ್ಮಂದಿರನ್ನು ಪೋಷಿಸಿಕೊಂಡು ಬರುವ ಜವಾಬ್ದಾರಿ ಎಲ್ಲವೂ ಹಿರಿಯ ಅಣ್ಣನಲ್ಲಿ ಇರುವುದರಿಂದ ಅವನಿಗೆ ವಿಶೇಷ ಮಹತ್ವವನ್ನು ನೀಡಲಾಗುತ್ತದೆ.
| ಮುಕುಟಾಗಮ (ಚರ್ಯಾಪಾದ) -8. 3)/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.