ಪ್ರತಿದಿನ ನವಿಲಿಗೆ ಊಟ ಕೊಡುವ ಅಮ್ಮ! ನೆಟ್ಟಿಗರ ಮನಗೆದ್ದಳು!

peacock
Published on

ನವದೆಹಲಿ: ಪ್ರಾಣಿಗಳೇ ಹಾಗೆ. ಯಾರಾದರೂ ಒಂದು ತುತ್ತು ಅನ್ನ ಕೊಟ್ಟರೆ, ಪ್ರೀತಿಯಿಂದ ತಲೆ ನೇವರಿಸಿದರೆ ಅವರನ್ನು ತುಂಬಾ ಹಚ್ಚಿಕೊಂಡು ಬಿಡುತ್ತವೆ. ಜತೆಗೆ ಪದೇಪದೆ ಅವರ ಬಳಿ ಹೋಗಿ ಕೇಳಿ ಊಟ ಇಸಿದುಕೊಂಡು ತಿನ್ನುತ್ತವೆ.

ಇಲ್ಲಿಯೂ ಹಾಗೆಯೇ. ರಾಜಸ್ಥಾನದಲ್ಲಿ ಮಾರುಕಟ್ಟೆಯೊಂದರಲ್ಲಿ ತರಕಾರಿ ಮಾರುವ ಮಹಿಳೆಯ ಬಳಿಗೆ ದಿನವೂ ಬರುವ ನವಿಲೊಂದು ಆಕೆಯ ಕೈಯಲ್ಲಿ ಕಾಳುಕಡಿಗಳನ್ನು ಪಡೆದು ತಿಂದು ಹೋಗುತ್ತದೆ. ಒಂದು ಕೈಯಲ್ಲಿ ತರಕಾರಿ ಮಾರುತ್ತಿದ್ದರೂ ಮತ್ತೊಂದು ಕೈಯಲ್ಲಿ ಆಕೆ ನವಿಲಿಗೆ ಕಾಳು ತಿನ್ನಿಸುತ್ತಾಳೆ.

ಟಿಂಕು ವೆಂಕಟೇಶ್​ ಎಂಬುವರು ಮಹಿಳೆ ನವಿಲಿಗೆ ಕಾಳು ತಿನ್ನಿಸುತ್ತಿರುವ ವಿಡಿಯೋವನ್ನು ಚಿತ್ರೀಕರಿಸಿಕೊಂಡು ಟ್ವಿಟ್ಟರ್​ನಲ್ಲಿ ಪೋಸ್ಟ್​ ಮಾಡಿದ್ದು, ಮಿಗಿಲಿಲ್ಲದ ಹೃದಯ ಶ್ರೀಮಂತಿಕೆ ಎಂಬ ಸಂದೇಶದೊಂದಿಗೆ ಟ್ವೀಟ್​ ಮಾಡಿದ್ದಾರೆ.

ಅನುಕಂಪ ಮತ್ತು ಕಕ್ಕುಲತೆಗಳು ತುಂಬಾ ದೂರದವರೆಗೆ ಸಾಗಬಲ್ಲವು. ಇಂಥ ಘಟನೆಗಳು ಜಾಗತಿಕವಾಗಿ ಎಲ್ಲೆಡೆ ಸಾಮಾನ್ಯವಾಗಿದ್ದು, ಇಂಥ ದೃಶ್ಯಗಳು ಬೇಗನೆ ಗಮನಸೆಳೆಯಲ್ಪಡುತ್ತವೆ. ಇಂಥ ದೃಶ್ಯಗಳು ಮನುಷ್ಯನಲ್ಲಿ ಭರವಸೆ ಮತ್ತು ಧನಾತ್ಮಕ ಚಿಂತನೆಗಳನ್ನು ಸೃಷ್ಟಿಸುತ್ತವೆ.

ಇಲ್ಲಿಯೂ ಹಾಗೆಯೆ. ನವಿಲಿಗೆ ಈ ಮಹಿಳೆ ಕಾಳು ತಿನ್ನಿಸುವ ದೃಶ್ಯ ಎಲ್ಲರ ಮನಗೆದ್ದಿದೆ. ಆಕೆಯ ಅನುಕಂಪ ಮತ್ತು ಕಕ್ಕುಲತೆಗಳನ್ನು ವರ್ಣಿಸಲು ಪದಗಳೇ ಇಲ್ಲವಾಗಿವೆ. ಲಕ್ಷಾಂತರ ಜನರು ಈ ವಿಡಿಯೋವನ್ನು ನೋಡಿ, ಮೆಚ್ಚಿಕೊಂಡು ಶೇರ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net