ನಿಮ್ಮ ಬುದ್ಧಿ ಸಾಮರ್ಥ್ಯಕ್ಕೊಂದು ಸವಾಲು... ಈ ಚಿತ್ರದಲ್ಲೊಂದು ನಾಯಿ ಇದೆ.. ಗುರುತಿಸಲು ಟ್ರೈ ಮಾಡಿ...

Dog 1
Published on

ಸೋಶಿಯಲ್ ಮೀಡಿಯಾದಲ್ಲಿ ಒಗಟುಗಳು ಮತ್ತು ಮೆದುಳಿಗೆ ಕಸರತ್ತು ನೀಡುವ ಆಟಗಳು ಯಾವಾಗಲೂ ವೈರಲ್ ಆಗಲು ಒಂದು ದೊಡ್ಡ ಕಾರಣವಿದೆ. ನಾವೆಲ್ಲರೂ ನಮ್ಮ ಬೌದ್ಧಿಕ ಸಾಮರ್ಥ್ಯವನ್ನು ಮತ್ತು ನಮ್ಮ ಅವಲೋಕನ ಶಕ್ತಿಯನ್ನು ಪರೀಕ್ಷಿಸುವಂತಹ ಸವಾಲುಗಳನ್ನು ಇಷ್ಟಪಡುತ್ತೇವೆ.

ಕರೊನಾವೈರಸ್ ಲಾಕ್‌ಡೌನ್ ನಿಂದಾಗಿ ಮನೆಯಲ್ಲೇ ಕಾಲ ಕಳೆಯುವಂತಾದಾಗ ನೆಟ್ಟಿಗರು ಇಂಥದ್ದೇ ಸವಾಲುಗಳನ್ನು ಎದುರುನೋಡುತ್ತಿದ್ದರು.

ಜೂನ್‌ನಲ್ಲಿ, ಟ್ವಿಟರ್‌ನಲ್ಲಿ ಹಂಚಿಕೊಂಡ ಪ್ರಾಣಿಯ ಚಿತ್ರಕ್ಕೆ ಕುತೂಹಲಕಾರಿ, ಆಸಕ್ತಿದಾಯಕ ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬಂತು. ಐಎಎಸ್ ಅಧಿಕಾರಿ ಡಾ.ಜೆ.ಕೆ ಸೋನಿ ಟ್ವಿಟ್ಟರ್ ನಲ್ಲಿ ಚಿತ್ರದೊಂದಿಗೆ ಸವಾಲನ್ನು ಪೋಸ್ಟ್ ಮಾಡಿದ್ದಾರೆ. ಮೊದಲ ಪ್ರಯತ್ನದಲ್ಲಿ ಅನೇಕ ಬಳಕೆದಾರರು ಅದನ್ನು ಸರಿಯಾಗಿ ಪತ್ತೆಹಚ್ಚಿದರೆ, ಕೆಲವರು ಗೂಬೆ, ಮತ್ತಿನ್ನೇನೇನೋ ಊಹಿಸಿದ್ದರು.

ಚಿತ್ರದಲ್ಲಿ ಒಂದು ಮಲಗುವ ಕೋಣೆ ಇದೆ. ಅದರೊಂದಿಗೆ ಮತ್ತಷ್ಟು ಅಂಶಗಳಿವೆ. ಅವು ಚಿತ್ರದಲ್ಲಿ ಸುಲಭವಾಗಿ ಗೋಚರಿಸುವುದಿಲ್ಲ.

ಚಿತ್ರದಲ್ಲಿ ಮಲಗುವ ಕೋಣೆ, ಕಂಬಳಿ ಮತ್ತು ಹಾಸಿಗೆಯ ಮೇಲೆ ಎರಡು ದಿಂಬುಗಳಿವೆ. ಮೂಲೆಯಲ್ಲಿ ಟೇಬಲ್ ಲ್ಯಾಂಪ್, ನೆಲದ ಮೇಲೆ ಇಯರ್‌ಫೋನ್ ಮತ್ತು ಕೆಲವು ಬಟ್ಟೆಗಳಿವೆ.

ಆದರೆ ಈ ಚಿತ್ರಕ್ಕೆ "ನಾನು 10 ನಿಮಿಷಗಳ ಕಾಲ ನನ್ನ ನಾಯಿಯನ್ನು ಕಾತುರದಿಂದ ಹುಡುಕುತ್ತಿದ್ದೆ" ಎಂದು ಶೀರ್ಷಿಕೆ ನೀಡಲಾಗಿದೆ.

ಆದ್ದರಿಂದ, ಈ ಚಿತ್ರದಲ್ಲಿ ನಾಯಿ ಇದೆ ಎಂಬುದು ಗೊತ್ತಾಗುತ್ತದೆ. ಕೆಲವರು ಬೇಗನೆ ಅದನ್ನು ಗುರುತಿಸಲು ಸಾಧ್ಯವಾದರೆ, ಚಿತ್ರದ ಎಲ್ಲ ಮೂಲೆಗಳನ್ನು ಎಚ್ಚರಿಕೆಯಿಂದ ಹುಡುಕಾಡಿದರೂ ಅನೇಕರು ಅದನ್ನು ಗುರುತಿಸಲು ಹೆಣಗಾಡಿದ್ದಾರೆ. ನೀವೂ ಗುರುತಿಸುತ್ತೀರಾ? ಟ್ರೈ ಮಾಡಿ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net