ವೀರಶೈವಾಗಮ

shiva
Published on

ಕವಚೇನಾಚ್ಛಾದನಂ ತು ಯತ್ತದೇವಾವಗುಂಠನಮ್ | ಹೃದಯಾದಿನ್ಯಾಸ ಏವ ಸಕಲೀಕರಣಂ ಮತಮ್ ||

ಶಿವಕವಚವನ್ನು ಶರೀರಕ್ಕೆ ಹೊದ್ದುಕೊಳ್ಳುವ ಯಾವ ಕ್ರಿಯೆ ಇದೆಯೋ ಅದನ್ನು ಅವಗುಂಠನವೆಂದು ಕರೆಯುತ್ತಾರೆ. ಶತ್ರು ಸೈನಿಕರ ಆಘಾತವನ್ನು ತಡೆದು ನಿಲ್ಲಿಸಲು ಸೈನಿಕರು ಯುದ್ಧಕ್ಕೆ ಹೋಗುವಾಗ ಕವಚಗಳನ್ನು ಧರಿಸಿಕೊಂಡು ಹೋಗುವಂತೆ ಆಧ್ಯಾತ್ಮಿಕ ಸಾಧನೆಯಲ್ಲಿ ಕಾಮ ಕ್ರೋಧ ಮುಂತಾದ ಅರಿ ಷಡ್​ವೈರಿಗಳು ಮಾಡುವ ಆಕ್ರಮಣದ ಪ್ರಭಾವವು ನಮ್ಮ ಮೇಲೆ ಉಂಟಾಗಬಾರದೆಂದರೆ ಶಿವಕವಚವನ್ನು ಧರಿಸಿಕೊಳ್ಳಬೇಕು. ಹೃದಯವೇ ಮೊದಲಾದ ಸ್ಥಾನಗಳಲ್ಲಿ ನ್ಯಾಸ ಮಾಡುವ ಕ್ರಿಯೆಯನ್ನು ಸಕಲೀಕರಣ ಎಂದು ಕರೆಯುತ್ತಾರೆ. ನಾರುದ್ರೋ ರುದ್ರಮರ್ಚಯೇತ್ ಎಂಬ ವೇದೋಕ್ತಿಯಂತೆ ಶಿವನಾಗದೇ ಶಿವನನ್ನು ಪೂಜಿಸಬಾರದು. ಶಿವನನ್ನು, ಶಿವನ ವಿಭಿನ್ನ ಶಕ್ತಿಗಳನ್ನು ಮತ್ತು ಶಿವ ಮಂತ್ರದ ಅಕ್ಷರಗಳನ್ನು ನಮ್ಮ ದೇಹದ ವಿಭಿನ್ನ ಅಂಗಾಂಗಗಳಲ್ಲಿ ನ್ಯಾಸದ ಮೂಲಕ ಧ್ಯಾನಪೂರ್ವಕ ಸ್ಥಾಪಿಸಿಕೊಳ್ಳುವುದರಿಂದ ತಾನೂ ಶಿವನಾಗಿ ಶಿವನನ್ನು ಪೂಜಿಸುವ ಮನಸ್ಥಿತಿಯು ಜಾಗೃತಗೊಳ್ಳುತ್ತದೆ.

| ಮುಕುಟಾಗಮ ( 5. 7) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net