ವೀರಶೈವಾಗಮ

shiva
Published on

ಭಕ್ತಃ ಸ್ವಶಕ್ತಯ ಪುಷ್ಪಂ ಫಲಂ ತಥಾ | ಮನಸಾ ಸರ್ವಸಾಮಗ್ರೀಂ ಪರಿಪೂರ್ಣಾಂ ವಿಭಾವಯೇತ್|| ಭಕೆôವ ಪರಿಪೂರ್ಣಾ ಯಾ ಸಾ ಪೂಜಾ ಸಫಲಾ ಭವೇತ್ ||

ಭಕ್ತನು ತನ್ನ ಶಕ್ತ್ಯಾನುಸಾರ ಸಂಗ್ರಹಿಸಿದ ಫಲ -ಪುಷ್ಪವೇ ಮೊದಲಾದ ಎಲ್ಲ ಸಾಮಗ್ರಿಗಳೂ ಹೇರಳವಾಗಿವೆಯೆಂದು ಮನಸ್ಸಿನಲ್ಲಿ ಭಾವಿಸಿಕೊಂಡು ಭಕ್ತಿಯಿಂದ ಶಿವನನ್ನು ಪೂಜಿಸಬೇಕು. ಏಕೆಂದರೆ ಯಾವ ಪೂಜೆಯು ಭಕ್ತಿಭಾವದಿಂದ ಪೂರ್ಣವಾಗಿರುತ್ತದೆಯೋ ಅದು ಖಂಡಿತವಾಗಿಯೂ ಸಫಲವಾಗುತ್ತದೆ. ಪೂಜೆಗೆ ಉಪಯೋಗಿಸುವ ಎಲ್ಲ ಸಾಮಗ್ರಿಗಳಲ್ಲಿ ಭಕ್ತಿಯೇ ಪರಮೋತ್ಕೃಷ್ಟವಾದುದು. ‘ಭಕ್ತಿಯೊಂದನೆ ಮಾಡಿದರೆ ಕೇಳಂಗನೇ ಮುಕ್ತಿಯನೊಲಿದೀವನೀಶನು’ ಎಂಬ ನಿಜಗುಣ ಶಿವಯೋಗಿಗಳ ಮಾತಿನಂತೆ ಅನನ್ಯ ಭಾವದಿಂದ ಮಾಡುವ ಭಕ್ತಿಯೇ ಮುಕ್ತಿಯ ಪ್ರಾಪ್ತಿಗೆ ಪರ್ಯಾಪ್ತವಾದುದು. ಆದ್ದರಿಂದ ಪ್ರಯತ್ನದ ಮೂಲಕ ಪ್ರಾಪ್ತವಾಗುವ ಎಲ್ಲ ಪೂಜಾ ಸಾಮಗ್ರಿಗಳನ್ನು ಯಾವುದೇ ಆಲಸ್ಯ ಮಾಡದೇ ಸಂಗ್ರಹಿಸಿಕೊಂಡು, ಎಷ್ಟೆಲ್ಲ ಪ್ರಯತ್ನದ ನಂತರವೂ ದೊರೆಯದೆ ಇರುವ ಪದಾರ್ಥಗಳನ್ನು ಅನನ್ಯವಾದ ಭಕ್ತಿಯಲ್ಲಿಯೇ ಪರಿಭಾವಿಸಿಕೊಳ್ಳಬೇಕು. ಆಗ ಕೊರತೆ ಇರುವ ಎಲ್ಲ ಪದಾರ್ಥಗಳ ಸ್ಥಾನವನ್ನು ಆ ಭಕ್ತಿಯೇ ತುಂಬುತ್ತದೆ.

| ಮುಕುಟಾಗಮ (4. 47-50) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net