

ವೇದಗಳಲ್ಲಾಗಲಿ ಅಥವಾ ಬೇರೆ ಗ್ರಂಥಗಳಲ್ಲಾಗಲಿ ಎಲ್ಲಿಯೂ ವೀರಶೈವ ಶಾಂಭವವ್ರತಕ್ಕೆ (ಧರ್ಮದ ದೀಕ್ಷೆ ಮತ್ತು ನಂತರದ ಆಚರಣೆಗೆ) ಸಮಾನವಾದ ಬೇರೆ ಯಾವ ವ್ರತವೂ ಇಲ್ಲ. ಸುಲಭವಾಗಿ ಮತ್ತು ಶೀಘ್ರವಾಗಿ ಮುಕ್ತಿಯನ್ನು ಬಯಸುವ ವ್ಯಕ್ತಿಯು ಈ ವ್ರತವನ್ನು ಶ್ರದ್ಧಾ ಪೂರ್ವಕ ಆಚರಿಸಬೇಕು. ವೇದಗಳಲ್ಲಿ ಸಾಧಕರ ಭಾವಸ್ಥಿತಿಗೆ ಅನುಗುಣವಾಗಿ ಮೋಕ್ಷಪ್ರಾಪ್ತಿಗೆ ಕರ್ಮ, ಉಪಾಸನೆ, ಜ್ಞಾನ ಮುಂತಾದ ಅನೇಕ ಮಾರ್ಗಗಳನ್ನು ಹೇಳಲಾಗಿದೆ. ಹಲವಾರು ಧರ್ಮಗಳು ಇವುಗಳಲ್ಲಿ ಒಂದನ್ನು ಮಾತ್ರ ಪ್ರಧಾನವಾಗಿರಿಕೊಂಡಿವೆ. ಆದರೆ ವೀರಶೈವ ಧರ್ಮವು ಸಾಧನೆಯ ವಿಭಿನ್ನ ಹಂತಗಳಲ್ಲಿ ಎಲ್ಲ ಮಾರ್ಗಗಳಿಗೂ ಸಮಾನ ಅವಕಾಶವನ್ನು ನೀಡುತ್ತದೆ. ಇದು ಇದರ ವಿಶೇಷತೆಗಳಲ್ಲೊಂದು.
| ಕಾರಣಾಗಮ (ಕ್ರಿ. ಪಾ. 1. 6) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.