ವೀರಶೈವಾಗಮ

dharma
Published on
ಯದೇತಚ್ಛಾಂಭವಂ ನಾಮ ವ್ರತಂ ಶ್ರುತ್ಯಂತಸಮ್ಮತಂ | ಪುನರ್ಭವಪ್ರಹಾಣಾಯ ಮುಮುಕ್ಷುಸ್ತತ್ಸಮಾಚರೇತ್ ||

ಶಾಂಭವ ವ್ರತವು ವೇದದ ಅಂತಿಮ ಭಾಗವಾದ ಉಪನಿಷತ್ತುಗಳಿಗೆ ಸಮ್ಮತವಾಗಿದೆ. ಮೋಕ್ಷಾಪೇಕ್ಷೆಯುಳ್ಳ ಸಾಧಕನು ಪುನರಪಿ ಜನನ-ಮರಣ ರೂಪ ಬಂಧನವನ್ನು ನಾಶಪಡಿಸಲು ಇದನ್ನು ಆಚರಿಸಬೇಕು. ವೀರಶೈವ ದೀಕ್ಷೆಯನ್ನು ಮತ್ತು ಅದನ್ನು ಪಡೆದ ನಂತರ ಅನುಸರಿಸಲಾಗುವ ಆಚರಣೆಗಳನ್ನು ಶಾಂಭವವ್ರತವೆಂದು ಕರೆಯಲಾಗುತ್ತದೆ. ವೇದಗಳ ಕರ್ಮ ಕಾಂಡ, ಉಪಾಸನಾ ಕಾಂಡ ಮತ್ತು ಜ್ಞಾನ ಕಾಂಡಗಳಲ್ಲಿ ವೀರಶೈವ ಧರ್ಮವು ಕರ್ಮಕಾಂಡದಲ್ಲಿ ಬರುವ ಪಶುಬಲಿ ಮುಂತಾದವುಗಳನ್ನು ವಿರೋಧಿಸಿದರೂ, ಉಪಾಸನಾ ಕಾಂಡದ ಕೆಲ ಭಾಗವನ್ನು ಮತ್ತು ಸಂಪೂರ್ಣ ಜ್ಞಾನಕಾಂಡ (ಉಪನಿಷತ್ತು)ವನ್ನು ಅಂಗೀಕರಿಸುತ್ತದೆ. ಕಾರಣ ವೀರಶೈವವು ಸಂಪೂರ್ಣ ವೇದವಿರೋಧಿಯಲ್ಲ.

| ಕಾರಣಾಗಮ (ಕ್ರಿ. ಪಾ. 1. 4 ) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net