ವೀರಶೈವಾಗಮ

shivalinga
Published on
ತನೋತಿ ವಿಪುಲಾನರ್ಥಾನ್ ತಂತ್ರಮಂತ್ರಸಮನ್ವಿತಾನ್ | ತ್ರಾಣಂ ಚ ಕುರುತೇ ಪುಂಸಾಂ ತೇನ ತಂತ್ರಮಿತಿ ಸ್ಮೃಂ ||

ಆಗಮಗಳಿಗೇನೆ ತಂತ್ರ ಎಂದು ಇನ್ನೊಂದು ಹೆಸರು. ತಂತ್ರ ಮತ್ತು ಮಂತ್ರಗಳಿಗೆ ಸಂಬಂಧಿಸಿದ ಅರ್ಥವನ್ನು ವ್ಯಾಪಕವಾಗಿ ವಿಸ್ತರಿಸುವುದರಿಂದ ಹಾಗೂ ಇದರಲ್ಲಿ ಪ್ರತಿಪಾದಿತ ತತ್ತ್ವ ಸಿದ್ಧಾಂತಗಳನ್ನು ಅರಿತು ಆಚರಿಸುವ ವ್ಯಕ್ತಿಗಳನ್ನು ಸದಾ ಸಂರಕ್ಷಿಸುವುದರಿಂದ ಇವುಗಳನ್ನು ತಂತ್ರ ವೆಂದು ಕರೆಯುತ್ತಾರೆ. ವೇದಗಳು ಶಿವನ ಶ್ವಾಸರೂಪ, ಆಗಮಗಳು ಅವನ ವೈಖರೀ ವಾಣೀರೂಪ. ಅಂತೆಯೇ ವೇದೋಕ್ತ ವಿಷಯ ರಹಸ್ಯಮಯ, ಆಗಮೋಕ್ತ ವಿಷಯ ಸುಸ್ಪಷ್ಟ. ವೇದಗಳಲ್ಲಿಯ ಜ್ಞಾನದ ವಿಸõತವಾದ, ಲಿಂಗ ಹಾಗೂ ಜಾತಿ ಭೇದವಿಲ್ಲದೇ ಸರ್ವರಿಗೂ ಸುಗಮವಾದ ಶಾಸ್ತ್ರವೇ ತಂತ್ರಾಗಮ ವಾšಯವಾಗಿದೆ.

| ಅಜಿತಾಗಮ (ಕ್ರಿ. ಪಾ. 1, 115 ) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net