ವೀರಶೈವಾಗಮ

Soul
Published on

ಜಾತಕಂ ಮೃತಕಂ ಚೇತಿ ಹ್ಯಾಶೌಚಂ ದ್ವಿವಿಧಂ ಸ್ಮೃಮ್ |

ತಚ್ಚತುರ್ಧಾಲ್ಪಮಧಿಕಮಪೂರ್ಣಂ ಪೂರ್ಣಮಿತ್ಯಪಿ ||

ಅಲ್ಪಕಾಲಿಕಮಲ್ಪಂ ಸ್ಯಾದಧಿಕಂ ಕಾಲತೋಠಧಿಕಮ್ |

ಅಪೂರ್ಣಂ ಸ್ಯಾತ್ ತ್ರಿರಾತ್ರಾದಿ ದಶಾಹಾದಿ ತು ಪೂರ್ಣಕಮ್ ||

ಹುಟ್ಟಿನ ಅಶೌಚ ಮತ್ತು ಸಾವಿನ ಅಶೌಚ -ಎಂದು ಎರಡು ವಿಧ. ಅದು ಮತ್ತೊಮ್ಮೆ ಅಲ್ಪ, ಅಧಿಕ, ಅಪೂರ್ಣ ಮತ್ತು ಪೂರ್ಣ ಎಂದು ನಾಲ್ಕು ವಿಧವಾಗಿದೆ. ಕೆಲವೇ ಕೆಲವು ಸಮಯದವರೆಗೆ ಇರುವ ಅಶೌಚವು ‘ಅಲ್ಪ ಅಶೌಚ’, ಹೆಚ್ಚು ಕಾಲದವರೆಗೆ ಇರುವಂತಹದು ‘ಅಧಿಕ ಅಶೌಚ’ವೆಂದು ಕರೆಯಲ್ಪಡುತ್ತವೆ. ಇದರಂತೆ ಮೂರು ರಾತ್ರಿಗಳ ಅವಧಿಯವರೆಗೆ ಇರುವ ಅಶೌಚವು ‘ಅಪೂರ್ಣ’ವೆಂತಲೂ ಮತ್ತು ಹತ್ತು ದಿನಗಳವರೆಗೆ ಇರುವ ಅಶೌಚವು ‘ಪೂರ್ಣವೆಂತಲೂ’ ಎನಿಸಿಕೊಳ್ಳುತ್ತದೆ.

ಅಶೌಚವನ್ನೇ ಸೂತಕವೆಂತಲೂ ಕರೆಯಲಾಗುತ್ತದೆ. ವಸ್ತುತಃ ವೀರಶೈವ ಧರ್ಮ ಶಾಸ್ತ್ರಗಳಲ್ಲಿ ಜನನ ಸೂತಕ, ಮರಣ ಸೂತಕ, ಉಚ್ಛಿಷ್ಟ ಸೂತಕ, ರಜಃ ಸೂತಕ ಮತ್ತು ಜಾತಿ ಸೂತಕ ಎಂಬುದಾಗಿ ಐದು ಪ್ರಕಾರದ ಸೂತಕಗಳನ್ನು ಹೇಳಲಾಗಿದೆ. ಆದರೆ ಇಲ್ಲಿ ಕೇವಲ ಜನನ ಮತ್ತು ಮರಣ ಸೂತಕಗಳನ್ನು ಕುರಿತು ವಿಶ್ಲೇಷಣೆ ಮಾಡಲಾಗಿದೆ.

| ಮುಕುಟಾಗಮ (ಚರ್ಯಾಪಾದ)-10. 11-12/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net