ವೀರಶೈವಾಗಮ

Deepavali
Published on

ನ ದೀಪಮಪ್ರಜ್ವಾಲ್ಯೈವ ಶುಭಕರ್ಮ ಸಮಾಚರೇತ್ | ದೈವಂ ಪೈತೃಕಮಪ್ಯೇವಮನ್ಮಥಾ ವಿಫಲಂ ಭವೇತ್||

ದೀಪವು ಪೂಜೆಯ ಅವಿಭಾಜ್ಯ ಅಂಗವಾಗಿರುವುದರಿಂದ ದೀಪವನ್ನು ಹಚ್ಚದೇ ಪೂಜೆ ಮೊದಲಾದ ಯಾವುದೇ ಮಂಗಳ ಕಾರ್ಯಗಳನ್ನು ಆಚರಿಸಬಾರದು. ಒಂದು ವೇಳೆ ದೀಪ ಹಚ್ಚದೇ ದೇವ ಸಂಬಂಧಿತವಾದ ಅಥವಾ ಪಿತೃಗಳಿಗೆ ಸಂಬಂಧಿಸಿದ ಪೂಜೆ ಮಾಡಿದರೆ ಆ ಎಲ್ಲ ಕಾರ್ಯಗಳೂ ನಿಷ್ಪಲವಾಗುತ್ತವೆ. ಪ್ರಸ್ತುತ ಸೂಕ್ಷ್ಮವಾಗಿ ವಿಚಾರಿಸಿದರೆ ದೇವರು ಬೆಳಕಿನ ಸ್ವರೂಪವೇ ಆಗಿರುವುದರಿಂದ ಅವನಿಗೆ ನಾವು ಹಚ್ಚುವ ದೀಪದ ಬೆಳಕಿನ ಅವಶ್ಯಕತೆ ಇರುವುದಿಲ್ಲ, ಆದರೆ ಶಿವನಲ್ಲಿ ಅವನಿಗೆ ಏನೇ ಕೊಟ್ಟರೂ ಅದನ್ನು ನೂರಾರು ಪಟ್ಟು ಹೆಚ್ಚು ಮಾಡಿ ಅವರಿಗೆ ಮರಳಿ ಕೊಡುವ ವಿಶೇಷ ಗುಣವಿರುತ್ತದೆ. ಆದ್ದರಿಂದ ಶಿವನಿಗೆ ಯಾರು ಒಂದು ದೀಪವನ್ನು ಬೆಳಗುವರೋ ಅವರ ಬದುಕಿನಲ್ಲಿ ಸುಖ ಶಾಂತಿ ಸಮೃದ್ಧಿ ರೂಪದ ನೂರಾರು ದೀಪಗಳ ಬೆಳಕು ಪ್ರಾಪ್ತವಾಗುತ್ತದೆ. ಆದ್ದರಿಂದ ಯಾವುದೇ ಪೂಜೆಯಲ್ಲಿ ಶಕ್ತ್ಯಾನುಸಾರ ದೀಪವನ್ನು ಬೆಳಗಬೇಕು.

| ಮುಕುಟಾಗಮ (4. 44)/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net