ವೀರಶೈವಾಗಮ

samadi
Published on
ಅಥಾವಿದಿತಕಾಲಃ ಸನ್ ಸಮುತ್ಕ್ರಾಂತಿಂ ಲಭೇತ ಚೇತ್| ತತ್ಪುತ್ರ ಆಶು ಕುರ್ವಿತ ಆತ್ಮಾರೋಪಂ ಯಥಾವಿಧಿ || ಆತ್ಮನ್ಯಾರೋಪಿತಸ್ಯಾಸ್ಯ ವಹ್ನೇಃ ಪ್ರಶಮನಾಯ ವೈ | ಷಡಧ್ವಶುದ್ಧೆ್ಯೖಃ ಕರ್ತವೋ› ಹ್ಯಾಪ್ಸು ಹೋಮಸ್ತ್ವನಂತರಮ್ ||

ವ್ಯಕ್ತಿಗೆ ತನ್ನ ಮರಣದ ಸಮಯ ಸನ್ನಿಹಿತವಾಗಿದೆ ಎಂದು ತಿಳಿದಾಗ ಉತ್ಕ್ರಮಣದ ಶಾಸ್ತ್ರೋಕ್ತ ವಿಧಿಯನ್ನು ಆಚರಿಸಬೇಕು. ಆದರೆ ಯಾರಿಗಾದರೂ ತಾನು ಮರಣ ಹೊಂದುವ ಸಮಯದ ಪೂರ್ವಾನುಮಾನವೂ ಇಲ್ಲದೆ ಒಮ್ಮಿಂದೊಮ್ಮೆಲೆ ಉತ್ಕ್ರಮಣ ಹೊಂದಿದರೆ, ಆಗ ಅವನ ಮಗನಾದವನು ಕೂಡಲೇ ಶಾಸ್ತ್ರೋಕ್ತವಾಗಿ ಅವನ ಮರಣೋತ್ತರ ವಿಧಿಯನ್ನು ಆಚರಿಸಬೇಕು. ಆ ಸಮಯದಲ್ಲಿ ವಿಶೇಷವಾಗಿ ತನ್ನಲ್ಲಿ ಅಗ್ನಿಯನ್ನು ಆರೋಪಿಸಿಕೊಂಡು ಶಾಸ್ತ್ರೋಕ್ತ ವಿಧಿಯಂತೆ ಅಂತ್ಯಸಂಸ್ಕಾರ ಮಾಡಬೇಕು. ವಿಧಿವಿಧಾನಗಳು ಪೂರ್ಣಗೊಂಡ ನಂತರ ತನ್ನಲ್ಲಿ ಆರೋಪಿಸಿಕೊಂಡಿರುವ ಈ ಅಗ್ನಿಯ ಉಪಶಮನಕ್ಕಾಗಿ ಭುವನಾಧ್ವ, ಪದಾಧ್ವ, ವರ್ಣಾಧ್ವ, ಕಲಾಧ್ವ, ತತ್ವಾಧ್ವ ಮತ್ತು ಮಂತ್ರಾಧ್ವ ಎಂಬ ಆರು ಅಧ್ವಗಳನ್ನು (ಷಡಧ್ವಗಳನ್ನು) ಶುದ್ಧಗೊಳಿಸಿಕೊಳ್ಳಬೇಕು. ನಂತರ ನೀರಿನಲ್ಲಿ ಹೋಮ ಮಾಡಬೇಕು.

| ಮುಕುಟಾಗಮ (ಚರ್ಯಾಪಾದ)/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net