

ನಂದಿ ಮೊದಲಾದ ಹೆಸರಿನ ವಿಶ್ವದೇವತೆಗಳ ಸ್ಥಾನದಲ್ಲಿ, ಮಹೇಶ್ವರ ಮುಂತಾದ ಹೆಸರುಳ್ಳ ಪಿತೃಗಳ ಸ್ಥಾನದಲ್ಲಿ ಮತ್ತು ಸಂರಕ್ಷಕನಾದ ಶಿವನ ಸ್ಥಾನದಲ್ಲಿ ಕೂಡ್ರಿಸಿ ಪೂಜೆ ಮಾಡಲು ನಿರ್ಧರಿಸಿದ ಮಾಹೇಶ್ವರರನ್ನು ನಿಗದಿತ ಸ್ಥಾನದಲ್ಲಿ ಕುಳಿತುಕೊಳ್ಳಲು ಭಕ್ತಿಯಿಂದ ಆಮಂತ್ರಿಸಬೇಕು. ಆ ಸಮಯದಲ್ಲಿ ಅವರೆಲ್ಲರಿಗೆ ಹೂ, ಅಕ್ಷತೆ ಮತ್ತು ಅರಿಸಿನವನ್ನು ಕೊಟ್ಟು, ಅನುಗ್ರಹವನ್ನು ತೋರಿಸಿ ತಮಗೆ ನಿಗದಿ ಮಾಡಿದ ಸ್ಥಾನದಲ್ಲಿ ಆಸೀನರಾಗಬೇಕು ಎಂದು ಪ್ರಾರ್ಥಿಸಬೇಕು. ಮಾಹೇಶ್ವರರು (ಜಂಗಮರು) ಮೌನವಾಗಿ ಶಿವನಲ್ಲಿ ಧ್ಯಾನಾಸಕ್ತರಾದ ಮನಸ್ಸುಳ್ಳವರಾಗಿ ಸಂತುಷ್ಟಭಾವದಿಂದ ಅವರವರ ಸ್ಥಾನವನ್ನು ಅಲಂಕರಿಸಬೇಕು. ಹೀಗೆ ಮಾಡದೆ ವ್ಯತಿರಿಕ್ತ ಭಾವವನ್ನು ತಾಳಿದರೆ, ಅವರು ನರಕವನ್ನು ಪಡೆಯುತ್ತಾರೆ.
| ಮುಕುಟಾಗಮ (ಚರ್ಯಾಪಾದ) -9. 10-12)/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.