ವೀರಶೈವಾಗಮ

Pithrupaksha
Published on

ಶ್ರಾದ್ಧಂ ತು ದ್ವಿವಿಧಂ ಪೋ›ಕ್ತಂ ಪಿತೃಮಲ್ಲೋಕವಾಸಿನಾಮ್ |

ಪಿತ್ಯಣಾಂ ತೃಪ್ತಿಜನಕಂ ಪಿತೃಲೋಕನಿವಾಸಿನಾಮ್ ||

ಶ್ರಾದ್ಧಸ್ಯಾಂಗಾನಿ ವಕ್ಷ್ಯಾಮಿ ಶೃಣು ರುದ್ರ ಯಥಾಕ್ರಮಮ್ |

ಹೋಮಸ್ತಯ ಪಿಂಡೋ ವಿಶ್ವೇದೇವಾಸ್ತಿಲಾಃ ಕುಶಾಃ ||

ಉದ್ದೇಶಃ ಪಿತೃದೇವಾನಾಮರ್ಘ್ಯ ಪಾತ್ರಂ ಚ ರಕ್ಷಕಮ್ ಅಪಸವ್ಯಂ ಚ ವಿಕಿರಂ ಶ್ರಾದ್ಧಾಂಗಮಿತಿ ಕೀರ್ತಿತಮ್ ||

ಪಿತೃಲೋಕದಲ್ಲಿ ವಾಸಿಸುವವರಿಗೆ ಮತ್ತು ಶಿವಲೋಕದಲ್ಲಿ ವಾಸಿಸುವವರಿಗೆ ಎಂಬುದಾಗಿ ಶ್ರಾದ್ಧವು ಎರಡು ವಿಧವಾಗಿದೆ. ಇವೆರಡು ಕೆಲವು ವಿಷಯಗಳಲ್ಲಿ ಭಿನ್ನ ಭಿನ್ನವಾಗಿ ಇರುತ್ತವೆ. ಇಲ್ಲಿ ಮೊದಲು ಪಿತೃಲೋಕದಲ್ಲಿ ವಾಸಿಸುವವರಿಗೆ ತೃಪ್ತಿಯನ್ನುಂಟು ಮಾಡುವ ಶ್ರಾದ್ಧದ ಅಂಗಗಳನ್ನು ಕ್ರಮವಾಗಿ ಹೇಳಲಾಗಿದೆ. ಅದಕ್ಕನುಗುಣವಾಗಿ ಹೋಮ, ತ್ಯಾಗ, ಪಿಂಡ, ವಿಶ್ವೇದೇವ, ಎಳ್ಳು, ದರ್ಭೆ, ಪಿತೃದೇವತೆಗಳ ಸಮೂಹ, ಅಘರ್Âದ ಪಾತ್ರೆ, ರಕ್ಷಾಸೂತ್ರ, ಅಪಸವ್ಯ ಮತ್ತು ವಿಕಿರ-ಈ ಎಲ್ಲವೂ ಶ್ರಾದ್ಧದ ಅಂಗಗಳು ಅಥವಾ ವಸ್ತುಗಳು. ಇಲ್ಲಿ ತಿಳಿಸಲಾದ ಸಂಗತಿಗಳನ್ನು ಉಪಯೋಗಿಸಿಕೊಂಡು ಪಿತೃಲೋಕದಲ್ಲಿ ವಾಸಿಸುವವರ ಶ್ರಾದ್ಧವನ್ನು ಆಚರಿಸಬೇಕು. ಅವರು ಸಂತೃಪ್ತರಾಗುತ್ತಾರೆ.

| ಮುಕುಟಾಗಮ (ಚರ್ಯಾಪಾದ) -8. 16-18)/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net