

ಪಿತ್ರಾದಯೋ ಮಹೇಶಾದಿರೂಪಾ ಯತ್ರ ಹಿ ಪೈತೃಕೇ|
ಆರಾಧ್ಯಂತೇ ತು ಭಕ್ಷ್ಯಾ ತದಾರಾಧನಮುದೀರಿತಮ್ ||
ಪಿತೃಗಳ ಶ್ರಾದ್ಧದಲ್ಲಿ ಮಹೇಶ ಮೊದಲಾದವರ ಸ್ವರೂಪವುಳ್ಳ ತಂದೆಯೇ ಮೊದಲಾದವರನ್ನು ಭಕ್ತಿಯಿಂದ ಆರಾಧಿಸುವು ದಕ್ಕೆ ಆರಾಧನೆ ಎಂದು ಹೆಸರು. ಅಂತೆಯೇ ವೀರಶೈವ ಲಿಂಗಾಯತ ಧರ್ಮದಲ್ಲಿ ಮೃತರಾದ ತನ್ನ ಪೂರ್ವಜರ ಶ್ರಾದ್ಧವನ್ನು ಪುಣ್ಯಾರಾಧನೆ ಎಂದು ಕರೆಯುತ್ತಾರೆ.
ಈ ಪುಣ್ಯಾರಾಧನೆಯ ಸಂದರ್ಭದಲ್ಲಿ ಮನೆಯವರೆಲ್ಲರೂ ಸೇರಿಕೊಂಡು ತಮ್ಮ ಮೃತ ಪೂರ್ವಜರ ಭಾವಚಿತ್ರವನ್ನು ಯಥೋಚಿತವಾದ ಸ್ಥಾನದಲ್ಲಿ ಇರಿಸಿ ಅದನ್ನು ವಿಧ್ಯುಕ್ತವಾಗಿ ಪೂಜೆ ಮಾಡಿ ಪೂರ್ವಜರಿಗೆ ಇಷ್ಟವಾಗಿದ್ದ ಪದಾರ್ಥವನ್ನು ಆಹಾರದ ರೂಪದಲ್ಲಿ ತಯಾರಿಸಿ ಅದನ್ನು ನೈವೇದ್ಯ ಮಾಡಿ ಆರತಿಯನ್ನು ಮಾಡಿ ತಮ್ಮ ಬಂಧು ಬಳಗದವರನ್ನು, ಗುರು ಹಿರಿಯರನ್ನು ವೀರಮಹೇಶ್ವರರನ್ನು, ಕರೆದು ಅವರಿಗೆ ಪ್ರಸಾದವನ್ನು ಮಾಡಿಸಿ ಈ ಪುಣ್ಯಾರಾಧನೆಯನ್ನು ನೆರವೇರಿಸುವ ವಿಶಿಷ್ಟವಾದ ಪದ್ಧತಿ ಇಂದಿನವರೆಗೂ ನಡೆದುಕೊಂಡು ಬಂದಿರುವುದನ್ನು ಕಾಣುತ್ತೇವೆ.
| ಮುಕುಟಾಗಮ (ಚರ್ಯಾಪಾದ) -8. 14)/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.