ವೀರಶೈವಾಗಮ

doopa
Published on

ಚಂದನಾಗರುಕರ್ಪರಕಸ್ತೂರಂ ಕುಂಕುಮಂ ತಥಾ | ತಕ್ಕೋಲೈಲಾ ನಾಗಪುಷ್ಪಂ ಲವಂಗತ್ವಕ್ ತಥೈವ ಚ | ಯಕ್ಷಕರ್ದಮಮೇತದ್ಧಿ ಮಮ ಪ್ರೀತಿಕರಂ ಸ್ಮೃಮ್ || ಚಂದನಾಗರುಕರ್ಪರಲವಂಗತ್ವಕ್ ಚ ಸಿಂಹಕಮ್ | ಏಲಾ ತಥಾ ಜಟಾಮಾಂಸೀ ಪ್ರಾಜಾಪತ್ಯಾಭಿಧಂ ಸ್ಮೃಮ್ ||

ಚಂದನ, ಅಗರು, ಕರ್ಪರ, ಕಸ್ತೂರಿ, ಕುಂಕುಮ, ತಕ್ಕೋಲ, ಏಲಕ್ಕಿ, ನಾಗಪುಷ್ಪ, ಲವಂಗ ಮತ್ತು ದಾಲ್ಟಿನ್ನಿ - ಇವುಗಳ ಮಿಶ್ರಣದಿಂದ ಸಿದ್ಧಪಡಿಸಿದ ಧೂಪವೇ’ ಯಕ್ಷಕರ್ದಮ ಧೂಪ’ ಎಂದು ಹೇಳಲ್ಪಡುತ್ತದೆ. ಇದು ಶಿವನಿಗೆ ಹೆಚ್ಚು ಪ್ರಿಯವೆಂದು ಹೇಳಲಾಗಿದೆ. ಇದರಂತೆ ಚಂದನ, ಅಗರು, ಕರ್ಪರ, ಲವಂಗ, ದಾಲ್ಟಿನ್ನಿ, ಸಿಂಹ ಏಲಕ್ಕಿ ಮತ್ತು ಜಟಾಮಾಂಸಿ ಇವುಗಳಿಂದ ಸಿದ್ಧಪಡಿಸಿದ ಧೂಪವನ್ನು’ ಪ್ರಾಜಾಪತ್ಯ ಧೂಪ ಎಂದು ಕರೆಯಲಾಗುತ್ತದೆ. ಕೆಲ ಕೆಲವು ಪದಾರ್ಥಗಳನ್ನು ಸೇರಿಸುವುದರಿಂದ ಮತ್ತು ಕೆಲ ಕೆಲವು ಪದಾರ್ಥಗಳನ್ನು ಕಡಿಮೆ ಮಾಡುವುದರಿಂದ ಅವುಗಳಿಂದ ಹೊರ ಬರುವ ಹೊಗೆಯ ಗಂಧದಲ್ಲಿ ಮತ್ತು ಅದರ ಪರಿಣಾಮಗಳಲ್ಲೂ ವ್ಯತ್ಯಾಸವಾಗುತ್ತದೆ. ಆದ್ದರಿಂದ ವ್ಯತ್ಯಾಸಗೊಂಡ ಪದಾರ್ಥಗಳ ಸಮೂಹಕ್ಕೆ ವಿಭಿನ್ನ ಹೆಸರುಗಳನ್ನು ನೀಡಲಾಗುತ್ತದೆ.

| ಮುಕುಟಾಗಮ (4. 31-32./ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net