

ತತ್ತ್ವಸಂಯೋಜನೆಯ ಮುಂದುವರಿದ ಭಾಗವಾಗಿ ಸದಾಶಿವ ಸ್ವರೂಪಿಯಾದ ಪ್ರಪಿತಾಮಹನನ್ನು ಅಂದರೆ, ಅಜ್ಜನ ತಂದೆಯನ್ನು ವೃದ್ಧಪ್ರಪಿತಾಮಹನಲ್ಲಿ ಅಂದರೆ ಅಜ್ಜನ ತಂದೆಯ ತಂದೆಯೊಂದಿಗೆ ಸೇರಿಸುತ್ತಿದ್ದೇನೆ ಎಂದು ಹೇಳುತ್ತಾ, ವೃದ್ಧ ಪ್ರಪಿತಾಮಹನ ಸ್ಥಾನದಲ್ಲಿ ಕುಳಿತಿರುವ ಜಂಗಮನಿಗೆ ಆ ಪಾತ್ರೆಯನ್ನು ಕೊಡಬೇಕು. ತದನಂತರ ಶಿವಸ್ವರೂಪಿಯಾದ, ನಿರ್ಮಲನಾದ ಆ ವೃದ್ಧಪ್ರಪಿತಾಮಹನು ನಿರಾಕಾರವಾದ ಪರಮ ಶಿವತತ್ವದಲ್ಲಿ, ಶಿವಸ್ವರೂಪದಲ್ಲಿ ಲೀನವಾಗುತ್ತಿದ್ದಾನೆ ಎಂದು ಭಾವಿಸಿಕೊಳ್ಳಬೇಕು. ಈ ವಿಧಾನದಿಂದ ಪಾತ್ರೆಯನ್ನು ಪರಿವರ್ತಿಸುತ್ತ ಪೂರ್ಣ ಮನಸ್ಸಿನಿಂದ ಭಾವನಾತ್ಮಕವಾಗಿ ಪೂರ್ವಜರನ್ನು ಪ್ರೇತಭಾವದಿಂದ ಮುಕ್ತಗೊಳಿಸಿದಾಗ ಅವರ ಚತುರ್ಥ ಭಾವನೆಯು (ಪ್ರೇತತ್ವ ಭಾವನೆಯು) ನಿವಾರಣೆಯಾಗುತ್ತದೆ.
| ಮುಕುಟಾಗಮ (ಚರ್ಯಾಪಾದ) -7. 19-21)/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.