

ರುದ್ರನು ಶಿವನನ್ನು ಕುರಿತು ತನ್ನ ಪೂರ್ವಜರು ಮೃತರಾದ ಅಂತರ ಆ ವ್ಯಕ್ತಿಯ ಆತ್ಮೋನ್ನತಿಗಾಗಿ ಮಾಡುವ ಕರ್ಮಗಳಲ್ಲಿ ಹನ್ನೆರಡನೆಯ ದಿನ ಆಚರಿಸಬೇಕಾದ ಎಲ್ಲ ವಿಧಿಗಳನ್ನು ನನಗೆ ಹೇಳು ಎಂದು ವಿನಂತಿಸಿಕೊಂಡಾಗ ಶಿವನು ವಿವರಿಸುತ್ತಾನೆ: ಮೃತ ವ್ಯಕ್ತಿಯ ಜೀವಭಾವ ನಿವೃತ್ತಿಯ ಮೂಲಕ ಚತುರ್ಥ ಭಾವದ ಅಂದರೆ, ಪ್ರೇತತ್ವ ಭಾವದ ನಿವೃತ್ತಿಗಾಗಿ ತತ್ವಸಂಯೋಜನ ವಿಧಿಯನ್ನು ಅನುಷ್ಠಾನಗೊಳಿಸಬೇಕು.
ಚತುರ್ಥ ಭಾವದ (ಪ್ರೇತತ್ವ ಭಾವದ) ನಿವೃತ್ತಿಯೂ ಉಂಟಾಗುತ್ತದೆ. ಮೃತ ವ್ಯಕ್ತಿಯ ಮಗನು ಹನ್ನೆರಡನೆಯ ದಿನ ತತ್ವಸಂಯೋಜನ ವಿಧಿಯನ್ನು ಆಚರಿಸಿದ ನಂತರ ಮೃತನು ತನ್ನ ಪೂರ್ವಜರೊಂದಿಗೆ ಸಮಾಗಮವನ್ನು ಹೊಂದುತ್ತಾನೆ, ಆಗ ಚತುರ್ಥ ಭಾವದ ರೂಪದಲ್ಲಿ (ಪ್ರೇತವಾಗಿ) ಒಂಟಿಯಾಗಿ ಜೀವಿಸಬೇಕಾಗಿಲ್ಲ. ವೀರಶೈವರಲ್ಲಿ ಸಪಿಂಡೀಕರಣ ವಿಧಿಯ ಆಚರಣೆ ನಿಷಿದ್ಧವಾಗಿದೆ. ಅದರ ಸ್ಥಾನದಲ್ಲಿ ಮೃತನ ಕಲೆಗಳು ಮತ್ತು ತತ್ವಗಳು ಆತನ ತಂದೆ, ಅಜ್ಜ, ಮುತ್ತಜ್ಜ ಇವರ ಕಲೆಗಳು ಮತ್ತು ತತ್ವಗಳಲ್ಲಿ ಸಮಾಗಮ ಹೊಂದುತ್ತವೆ. ಈ ವಿಧಾನದಿಂದ ಮೃತನ ಪ್ರೇತದ ಚತುರ್ಥ ಭಾವನೆಯ ಕೊನೆಯಾಗುತ್ತದೆ.
| ಮುಕುಟಾಗಮ (ಚರ್ಯಾಪಾದ) -7. 2 / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.