

ಮನೆಯಲ್ಲಿ ತನ್ನ ತಂದೆ ಮುಂತಾದ ಹಿರಿಯರು ಲಿಂಗೈಕ್ಯರಾದಾಗ ಮೃತರಾದ ಹನ್ನೊಂದನೆಯ ದಿನದಂದು ಮೊದಲನೆಯ ಆರಾಧನೆಯನ್ನು ಮಾಡಬೇಕು. ಆಮೇಲೆ ಒಂದು ತಿಂಗಳು ಮುಗಿಯುವುದಕ್ಕೆ ಮೊದಲು ಊನಮಾಸಿಕ ಆರಾಧನೆಯನ್ನು ಮಾಡಬೇಕು. ಮೂರು ಪಕ್ಷಗಳ ನಂತರ ತ್ರಿಪಕ್ಷಿಕ ಆರಾಧನೆ ಮಾಡಬೇಕು ಮತ್ತು ಆರು ತಿಂಗಳು ಮುಗಿಯುವುದಕ್ಕೆ ಮೊದಲು ಊನಷಾಣ್ಮಾಸಿಕ ಆರಾಧನೆಯನ್ನು ಮಾಡಬೇಕು.
ಇದಲ್ಲದೇ ಪ್ರತಿ ತಿಂಗಳು ಆತನು ತೀರಿಹೋದ ದಿನದ ತಿಥಿಯು ಮುಂದಿನ ಮಾಸಗಳಲ್ಲಿ ಬಂದ ದಿನದಂದು ಮತ್ತು ಒಂದು ವರ್ಷ ಮುಗಿಯುವುದಕ್ಕೆ ಮೊದಲು - ಹೀಗೆ ಒಂದು ವರ್ಷದಲ್ಲಿ ಇವೇ ಮುಂತಾದ ಹದಿನಾರು ಆರಾಧನೆಗಳನ್ನು ಆಚರಿಸಬೇಕು. ಇಂತಹ ಎಲ್ಲ ಸಂದರ್ಭಗಳಲ್ಲಿ ಮೃತರ ಹೆಸರಿನಿಂದ ಮಾಡಲಾಗುವ ಆರಾಧನೆಯಿಂದ ಮೃತರ ಆತ್ಮಕ್ಕೆ ಮಾತ್ರ ಸದ್ಗತಿಯಾಗುವುದಿಲ್ಲ, ಬದಲಾಗಿ ಅದನ್ನು ಮಾಡುವ ವ್ಯಕ್ತಿಗೂ ಕಾಲಾಂತರದಲ್ಲಿ ಸದ್ಗತಿ ಲಭಿಸುತ್ತದೆ.
| ಮುಕುಟಾಗಮ (ಚರ್ಯಾಪಾದ -6. 6)/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.
//////////////////////////////