ವೀರಶೈವಾಗಮ

shivalinga
Published on
ಅದೀಕ್ಷಿತೋ ಯದಿ ಪಿತಾ ತತ್ತನೋರ್ನಹಿ ಸಂಸ್ಕೃತಿಃ | ತಮಾವಾಹ್ಯಾಥ ಕೂರ್ಚಾಯಾಂ ದೀಕ್ಷಾಂ ದತ್ವಾ ಯಥೋದಿತಮ್ | ಸಮಾಧಿಂ ಸುವಿಧಾಯಾಥ ನಿತ್ಯಕರ್ವದಿಕಂ ಚರೇತ್ ||

ಒಂದು ವೇಳೆ ತಂದೆಯು ಶಿವದೀಕ್ಷೆಯಿಲ್ಲದವನಾಗಿದ್ದರೆ ನೇರವಾಗಿ ಈ ಹಿಂದೆ ಹೇಳಿದ ಅಂತ್ಯಸಂಸ್ಕಾರದ ವಿಧಿಗಳನ್ನು ಮಾಡಬಾರದು. ಅಂತಹ ಸಂದರ್ಭ ದಲ್ಲಿ ದರ್ಬೆಯಿಂದ ಒಂದು ಶರೀರವನ್ನು ಮಾಡಿ ಅವನನ್ನು ಅದರಲ್ಲಿ ಆವಾಹನೆ ಮಾಡಿ ದೀಕ್ಷೆಯನ್ನು ಮಾಡಬೇಕು ಮತ್ತು ಪಾರ್ಥಿವ ದೇಹಕ್ಕೆ ಲಿಂಗವನ್ನು ಧರಿಸಬೇಕು. ತರುವಾಯ ಸಮಾಧಿಯ ಇತರ ವಿಧಿಗಳನ್ನು ಮತ್ತು ನಿತ್ಯ ಕರ್ಮ ಗಳನ್ನು ಆಚರಿಸಬೇಕು.

ವೀರಶೈವ ಧರ್ಮದಲ್ಲಿ ಜನಿಸಿದ ಪ್ರತಿಯೊಬ್ಬರೂ ಲಿಂಗ ದೀಕ್ಷೆಯನ್ನು ಪಡೆದುಕೊಳ್ಳಬೇಕೆಂಬುದು ಆಗಮ ಶಾಸ್ತ್ರದ ಅಭಿಮತವಾಗಿದೆ. ಪ್ರಸ್ತುತ ಎಂಟನೇ ವರ್ಷದಲ್ಲಿ ಲಿಂಗ ದೀಕ್ಷೆ ಮಾಡುವ ಪದ್ಧತಿ ಇದೆ. ಆ ಸಮಯಕ್ಕೆ ಆಗದಿದ್ದರೆ ನಂತರವೂ ಎಷ್ಟು ಸಾಧ್ಯವೋ ಅಷ್ಟು ಬೇಗ ಪಡೆದುಕೊಳ್ಳಬೇಕು. ಆಗದಿದ್ದರೆ, ಮರಣ ಬರುವ ಪೂರ್ವದಲ್ಲಿ ಯಾವಾಗಲೂ ಪಡೆದುಕೊಳ್ಳಬಹುದು. ಒಂದು ವೇಳೆ ಸಾಯುವವರಿಗೂ ದೀಕ್ಷೆ ಪಡೆದುಕೊಳ್ಳದೇ ಹೋದರೆ ಕೊನೆಗೆ ಆ ಅನಿವಾರ್ಯವಾಗಿ ಮೃತ ದೇಹಕ್ಕೆ ದೀಕ್ಷೆ ಮಾಡಬೇಕಾಗುತ್ತದೆ.

| ಮುಕುಟಾಗಮ (ಚರ್ಯಾಪಾದ -5. 19)/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net